ಕೋಲಾರ: ವಕ್ಫ್ ಮಸೂದೆಯನ್ನು ಜಾರಿಗೆ ತಂದಿರುವುದು ಶಾಸಕಾಂಗದ ಸುಧಾರಣೆ ಕಾಣಬಹುದು ಎಂದು ಸಂಸದ ಎಂ.ಮಲ್ಲೇಶ್ಬಾಬು ಹೇಳಿದರು.
ದೆಹಲಿಯಲ್ಲಿ ನಡೆಯುತ್ತಿರುವ ಸಂಸತ್ನಲ್ಲಿ ಚರ್ಚೆಯ ವಕ್ಫ್ ತಿದ್ದುಪಡಿ ಮಸೂದೆ&-2024 ಬೆಂಬಲಿಸಿ ಮಾತನಾಡಿ, ವಕ್ಫ್ ವಿಚಾರವು ಸಾಕಷ್ಟು ಸದ್ದು ಮಾಡಿದೆ. ಇದರದಿಂದ ಸಾಕಷ್ಟು ಮಂದಿ ಸಂಕಷ್ಟಕ್ಕೂ ಇಡಾಗಿದ್ದಾರೆ ಎಂದರು.
ದೇಶಾದ್ಯಂತ ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ನ್ಯಾಯಪರತೆ ತರುವ ಗುರಿ ಹೊಂದಿದ್ದು, ಮಹತ್ವದ ಬಿಲ್ ಶಾಸಕಾಂಗದ ಸುಧಾರಣೆ ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯದಲ್ಲಿ ದೇವಾಲಯಗಳ, ಸಾರ್ವಜನಿಕರ ಆಸ್ತಿಗಳನ್ನು ವಕ್ಫ್ ಬೋರ್ಡ್ಗೆ ವರ್ಗಾವಣೆ ಮಾಡಿ, ದಾಖಲೆ ಸೃಷ್ಟಿಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ. ಇದರಿಂದಾಗಿ ಬಡವರು ತೊಂದರೆ ಅನುಭವಿಸಿದ್ದಾರೆ. ಅಲ್ಲದೆ ಸಾಕಷ್ಟು ಹೋರಾಟಗಳೂ ನಡೆದಿವೆ ಎಂದು ಸಂಸತ್ ಗಮನಕ್ಕೆ ತಂದರು.
ಪ್ರಧಾನಮಂತ್ರಿ ಮತ್ತು ಅಮಿತ್ ಷಾ ಅವರ ಕ್ರಿಯಾತ್ಮಕ ನಾಯಕತ್ವದಲ್ಲಿ ನ್ಯಾಯ ಮತ್ತು ಸಮಾನ ಆಡಳಿತ ಖಚಿತಪಡಿಸಿಕೊಳ್ಳಲು, ಸರ್ಕಾರದ ಅಚಲ ಬದ್ಧತೆಗೆ ಈ ವಕ್ಫ್ ತಿದ್ದುಪಡಿ ಮಸೂದೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ರಾಷ್ಟ್ರಕವಿ ಕುವೆಂಪು ಅವರ ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಹಾನ್ ತತ್ವವನ್ನು ಅಳವಡಿಸಿಕೊಂಡು ರಾಜಕಾರಣದಲ್ಲಿ ಮಾದರಿಯಾಗಿದ್ದಾರೆ. ಆದರೆ, ಕಾಂಗ್ರೆಸ್ ಒಂದು ಸಮುದಾಯದ ಓಲೈಕೆಗಾಗಿ ತೀರ್ಮಾನ ಕೈಗೊಳ್ಳುತ್ತಿದೆ. ವೊಟ್ಬ್ಯಾಂಕ್ ರಾಜಕೀಯ ಮಾಡುತ್ತಿದೆ. ಕರ್ನಾಟಕದಲ್ಲಿಯೂ ಒಡೆದು ಆಳುವ ಕುಟಿಲ ನೀತಿ ಮುಂದುವರಿಸಿದ್ದು, ಇದು ಆತಂಕಕಾರಿ ಬೆಳವಣಿಗೆ ಎಂದು ದೂರಿದರು.
ಜ್ಯಾತ್ಯಾತಿತ ರಾಷ್ಟ್ರದಲ್ಲಿ ಸಮಾಜ ಸುಧಾರಣೆ ಮಾಡುವ ನೀತಿ ಜಾರಿಯಲ್ಲಿರಬೇಕು, ಅದು ಬಿಟ್ಟು ಒಂದು ಧರ್ಮ ಓಲೈಕೆಯನ್ನು ಸರ್ಕಾರಗಳು ಮಾಡಬಾರದು. ಲೋಕಸಭೆಯಲ್ಲಿ ಆಗುವ ಅಂಗೀಕಾರಗಳನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.