ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನ್ಯಾಯಾಧೀಶ ದಾಸರಿ ಕ್ರಾಂತಿಕಿರಣ್ ಮಕ್ಕಳಿಗೆ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಿಸಿದರು. ಎಸ್.ಎಸ್.ಸಂತೋಷ್‌ಕುಮಾರ್, ಎಚ್.ಎ.ಸಾಜು, ಡಾ. ಆಸ್ನಾ, ಪೂರ್ಣಿಮಾ ಇದ್ದರು. 
ಜಿಲ್ಲೆ

ಭ್ರೂಣದಿಂದಲೇ ಮಕ್ಕಳಿಗೆ ಕಾನೂನು ರಕ್ಷಣೆ

ನ್.ಆರ್.ಪುರ: ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾನೂನು ಅರಿತು ಗೌರವಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್ ಸಲಹೆ ನೀಡಿದರು.

ಅಳಲಗೆರೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ವಕೀಲರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಇಲಾಖೆ ಹಾಗೂ ಮುರಾರ್ಜಿ ದೇಸಾಯಿ ವಸತಿ ಶಾಲೆ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಕಳ್ಳ ಸಾಗಣೆ ವಿರೋಧಿ ದಿನಾಚರಣೆ ಹಾಗೂ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ತಾಯಿಯ ಭ್ರೂಣದಿಂದಲೇ ಕಾನೂನಿನ ರಕ್ಷಣೆ ಪ್ರಾರಂಭವಾಗಿ ಜೀವನದ ಅಂತ್ಯದವರೆಗೂ ರಕ್ಷಿಸುತ್ತದೆ. ಯಾವುದೇ ಸಮಸ್ಯೆ ಆದರೂ ತಾಲೂಕು ಕಾನೂನು ಸೇವಾ ಸಮಿತಿ ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದರು.
ವಿದ್ಯಾರ್ಥಿನಿಯರು ಆರೋಗ್ಯ ಹಾಗೂ ನೈರ್ಮಲ್ಯ ತಿಳಿದುಕೊಂಡು ಆರೋಗ್ಯ ಕಾಪಾಡಿಕೊಳ್ಳಬೇಕು. ಸರ್ಕಾರದಿಂದ ನೀಡುವ ಉಚಿತ ಶುಚಿ ಸ್ಯಾನಿಟರಿ ನ್ಯಾಪ್ಕಿನ್ ಬಳಿಸಿಕೊಂಡು ನೈರ್ಮಲ್ಯಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.
ಡಾ. ಆಸ್ನಾ ಮಾತನಾಡಿ, ಹರೆಯ ಎಂಬುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಈ ಹಂತದಲ್ಲಿ ಮಾನಸಿಕ ಹಾಗೂ ದೈಹಿಕ ಬದಲಾವಣೆಗಳಾಗುತ್ತವೆ. ಈ ಬದಲಾವಣೆ ಅರಿತುಕೊಂಡು ಯಾವುದೇ ಸಮಸ್ಯೆ ಎದುರಾದರೂ ಪಾಲಕರು ವೈದ್ಯರಿಂದ ಸಲಹೆ ಪಡೆದುಕೊಳ್ಳಬೇಕು. ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಹದಿಹರೆಯದ ಹೆಣ್ಣು ಮಕ್ಕಳು ಪ್ರಕೃತಿದತ್ತವಾಗಿ ನಡೆಯುವ ಋತುಚಕ್ರದ ಕ್ರಿಯೆ ಸಂದರ್ಭದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಿ. ಆರೋಗ್ಯ ಇಲಾಖೆಯಿಂದ ವಿತರಿಸುತಿರುವ ಶುಚಿ ಸ್ಯಾನಟರಿ ನ್ಯಾಪ್ಕಿನ್ ಸೂಕ್ತವಾಗಿ ಬಳಸುವಂತೆ ತಿಳಿಸಿದರು.
ವಕೀಲ ಎಚ್.ಎ.ಸಾಜು ಅವರು ಮಾನವ ಕಳ್ಳ ಸಾಗಣೆ ತಡೆ ಕುರಿತು ಮಾಹಿತಿ ನೀಡಿದರು. ಮುರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯೆ ಪೂರ್ಣಿಮಾ, ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್.ಸಂತೋಷಕುಮಾರ್, ಡಾ. ಶ್ವೇತಾ, ಅನಿತಾ, ಆಪ್ತ ಸಮಾಲೋಚಕ ಸುಹಾಸ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ ಇದ್ದರು.