ಜಿಲ್ಲೆ

ಅರಣ್ಯವಾಸಿಗಳ ಜಾಗೃತಿಗಾಗಿ ಕಾನೂನು ಕರಪತ್ರ ಬಿಡುಗಡೆ

ಸಿದ್ದಾಪುರ: ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳಿಗೆ ಕಾನೂನು ಜಾಗೃತಿ ಜಾಥಾ-2025ರ ಅಂಗವಾಗಿ ಜಾಗೃತಿ ಕಾನೂನು ಕರಪತ್ರವನ್ನು ಹಿರಿಯ ಸಾಮಾಜಿಕ ಚಿಂತಕ ಕಾಗೋಡ ತಿಮ್ಮಪ್ಪ ಸಾಗರದ ಸ್ವಗೃಹದಲ್ಲಿ ರಾಜ್ಯಾದ್ಯಂತ ಅರಣ್ಯವಾಸಿಗಳಿಗೆ ಕಾನೂನಿನ ಅಂಶವನ್ನು ಹೊಂದಿರುವ ಕರಪತ್ರವನ್ನು ಗುರುವಾರ ಅವರು ಬಿಡುಗಡೆಗೊಳಿಸಿದರು.

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಮಾತನಾಡಿ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ವೈಫಲ್ಯದ ಹಿನ್ನೆಲೆಯಲ್ಲಿ ಅರಣ್ಯವಾಸಿಗಳಿಗೆ ಕಾನೂನು ಬದ್ಧತೆ ದೃಷ್ಟಿಯಿಂದ, ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನದಲ್ಲಿ ಅವಶ್ಯ ಬೇಕಾಗಿರುವ ದಾಖಲೆಗಳು ಮತ್ತು ಮಂಜೂರಿ ಪ್ರಕ್ರಿಯೆಯಲ್ಲಿ ಅರಣ್ಯವಾಸಿಯ ಮೂರು ತಲೆಮಾರಿನ ವೈಯಕ್ತಿಕ ದಾಖಲೆಗೆ ಒತ್ತಾಯಿಸಲು ಅಥವಾ ಅಪೇಕ್ಷೀಸುವುದು ಕಾನೂನು ಬಾಹಿರ. ಸಾಂರ್ದಭಿಕ ದಾಖಲೆಯಡಿ ಅರಣ್ಯ ಭೂಮಿಯ ಸಾಗುವಳಿ ಹಕ್ಕು ನೀಡುವ ಕಾನೂನು ಅಂಶಗಳು ಕರಪತ್ರದಲ್ಲಿ ಉಲ್ಲಾಖಿಸಲಾಗಿದೆ. ತಿಳಿವಳಿಕೆ ಕೊರತೆಯಿಂದ ಅರಣ್ಯವಾಸಿಗಳು ಎಲ್ಲ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅರಣ್ಯವಾಸಿಗಳು ಕಾನೂನು ಜ್ಞಾನ ವೃದ್ಧಿಸಿಕೊಳ್ಳಬೇಕು. ಹೋರಾಟಗಾರರ ವೇದಿಕೆ ನೇತೃತ್ವದಲ್ಲಿ ಜರುಗುತ್ತಿರುವ ಅರಣ್ಯವಾಸಿಗಳ ಕಾನೂನು ಜಾಗೃತಿ ಜಾಥಾ ಬೆಂಬಲಿಸಬೇಕು ಎಂದರು.

ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಉಪಸ್ಥಿತರಿದ್ದರು.