ಜಮಖಂಡಿ ತಾಲೂಕಿನ ಶೂರಪಾಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಸಾವಳಗಿ ಪಿಎಸ್‌ಐ ಅಪ್ಪಣ್ಣ ಐಗಳಿ ಉದ್ಘಾಟಿಸಿದರು. ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ಎಸ್‌ಡಿಎಂಸಿ ಉಪಾಧ್ಯಕ್ಷ ರಾಜು ಕುಂಚನೂರ, ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ, ಗಿರಿಮಲ್ಲಪ್ಪ ಅರಕೇರಿ ಇದ್ದರು. 
ಜಿಲ್ಲೆ

ಕಾನೂನು ಜ್ಞಾನ ಅವಶ್ಯ

ದತ್ತಾತ್ರೇಯ ಪಿ ಕುಲಕರ್ಣಿ

ಜಮಖಂಡಿ: ವಿದ್ಯಾರ್ಥಿಗಳು ಕಾನೂನು ಜ್ಞಾನ ಬೆಳೆಸಿಕೊಳ್ಳಬೇಕು ಎಂದು ರಾಯಚೂರ ಡಿವೈಎಸ್‌ಪಿ ಶಾಂತವೀರ ಈ. ಹೇಳಿದರು.

ತಾಲೂಕಿನ ಶೂರಪಾಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಕಾನೂನು ಅರಿವು, ನಿವೃತ್ತ ಶಿಕ್ಷಕರಿಗೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಕ್ಕಳು ನಿತ್ಯ ಜ್ಞಾನಾರ್ಜನೆಯಲ್ಲಿ ತೊಡಗಬೇಕು. ಆಟ-ಪಾಠಗಳ ಜತೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ತೊಡಗಬೇಕು ಎಂದರು.

ಶೂರಪಾಲಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದರೆ 25 ಸಾವಿರ ರೂ. ಪ್ರೋತ್ಸಾಹಧನ ನೀಡಲಾಗುವುದು. ಶಾಲಾ ಚಟುವಟಿಕೆಗಳಿಗೆ ಅಗತ್ಯ ಬಿದ್ದರೆ ನನ್ನ ಕೈಲಾದಷ್ಟು ಸಹಾಯ ಮಾಡುವೆ ಎಂದರು.

ಸಾವಳಗಿ ಪೊಲೀಸ್ ಠಾಣೆಯ ಪಿಎಸ್‌ಐ ಅಪ್ಪಣ್ಣ ಐಗಳಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಪಾಲಕರಿಗೆ ರಸ್ತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಬೇಕು. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಬೇಕು. ಸೈಬರ್ ಕ್ರೈಂ ಹೆಚ್ಚುತ್ತಿದ್ದು, ಮಕ್ಕಳು ಅನಗತ್ಯವಾಗಿ ಮೊಬೈಲ್ ಬಳಕೆ ಮಾಡಬಾರದು ಎಂದರು.

ಪ್ರೌಢ ಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಲ್ಲೋಳಿ, ಮುಖ್ಯಶಿಕ್ಷಕ ಎನ್.ಎಸ್. ಶೇಡಶ್ಯಾಳ, ಡಾ. ಈಶ್ವರ ಕಣಬೂರ, ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ ಮಾತನಾಡಿದರು.

ಕಾನಿಪ ಅಧ್ಯಕ್ಷ ಲಕ್ಷ್ಮೀಕಾಂತ ದುದಗಿ, ನಿವೃತ್ತ ಶಿಕ್ಷಕ ಎಚ್.ಎಂ. ಉಸ್ತಾದ, ಪಿಕೆಪಿಎಸ್ ಕಾರ್ಯದರ್ಶಿ ದುಂಡಪ್ಪ ಕುಂಚನೂರ, ಬಸವರಾಜ ತಿಪ್ಪನ್ನವರ, ಆದಿ ಬಳಗಾನೂರ, ಕಾರ್ತಿಕ ಧನ್ಯಾಳ, ದ್ವಿತೀಯ ಪರೀಕ್ಷೆಯಲ್ಲಿ ಉತ್ತಮ ಅಂಕಪಡೆದ ನಂದಿನಿ ಜಮಖಂಡಿ ಅವರನ್ನು ಸನ್ಮಾನಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ರಾಜು ಕುಂಚನೂರ, ಪಿಕೆಪಿಎಸ್ ಅಧ್ಯಕ್ಷ ರಮೇಶ ಕಣಬೂರ, ಗಿರಿಮಲ್ಲಪ್ಪ ಅರಕೇರಿ, ಈಶ್ವರ ಕಂಕಣವಾಡಿ, ಎಸ್.ಐ. ಲೋಣಿ, ಶೇಖರ ಪಾಟೀಲ, ನರಸಿಂಹ ಪಾಟೀಲ, ಸಿದ್ದು ಕುಂಚನೂರ, ಮಹಾದೇವ ಇಂಗಳಗಿ, ವರದಿಗಾರ ಎಂ.ಎನ್. ನದ್ಾ ಇತರರು ಇದ್ದರು.

ಬಸವರಾಜ ತಿಪ್ಪನ್ನವರ ಸ್ವಾಗತಿಸಿದರು. ಸಿ.ಕೆ. ಹೊಸೂರ ನಿರೂಪಿಸಿದರು. ಗುರಲಿಂಗ ಕೊಕ್ಕನವರ ವಂದಿಸಿದರು.