ಹಂದಿಗುಡ್ಡ ಕಾವಲ್ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಎಂ.ರಾಜು, ಯೋಗೇಶ್, ಎಂ.ಆರ್.ಧನಪಾಲ್, ಶಂಕರ್, ಹಮ್ಮಿಗೆ ಶ್ರೀನಿವಾಸ್, ಮಂಜುಳಾ, ರಾಜಶೇಖರ್ ಇದ್ದರು. 
ಜಿಲ್ಲೆ

ಹಂದಿಗುಡ್ಡ ಕಾವಲ್‌ನಲ್ಲಿ ಕಾನೂನು ಅರಿವು ಕಾರ್ಯಕ್ರಮ

ಲೋಕೇಶ್ ಮನು. ಡಿ

ಬೈಲುಕುಪ್ಪೆ: ಹಾಡಿಯ ಜನರು ಇಂದಿನ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರೆ ಮಾತ್ರ ನಿಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಪಿರಿಯಾಪಟ್ಟಣದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ರಾಜು ತಿಳಿಸಿದರು.

ಪಿರಿಯಾಪಟ್ಟಣ ತಾಲೂಕಿನ ಬೈಲುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಣ್ಯ ಹಂಚಿನಲ್ಲಿರುವ ಹಂದಿಗುಡ್ಡ ಕಾವಲ್ ಸಮುದಾಯ ಭವನದ ಆವರಣದಲ್ಲಿ ಮಂಗಳವಾರ ಬೆಂಗಳೂರಿನ ವಿಶ್ವ ವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಶಿಬಿರಾರ್ಥಿಗಳಿಗೆ ಅಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರು ಪ್ರೋತ್ಸಾಹ ನೀಡಿದರೆ ಮಾತ್ರ ಮಕ್ಕಳು ಉನ್ನತ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸುತ್ತಾರೆ. ಆಗ ಮಾತ್ರ ವಿದ್ಯಾರ್ಥಿಗಳು ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆರ್.ಯೋಗೇಶ್ ಮಾತನಾಡಿ, ಪಾಲಕರು ಬಾಲ್ಯವಿವಾಹದ ಕಡೆ ಗಮನ ಕೊಡಬಾರದು. ಗಂಡು ಮಕ್ಕಳಿಗೆ 21 ವರ್ಷ, ಹೆಣ್ಣು ಮಕ್ಕಳಿಗೆ 18 ವರ್ಷ ಆದ ನಂತರ ಸರಳವಾಗಿ ವಿವಾಹ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಧನಪಾಲ್, ಕಾರ್ಯದರ್ಶಿ ಕೆ.ಶಂಕರ್ ಮಾತನಾಡಿದರು. ವಕೀಲ ಹಮ್ಮಿಗೆ ಶ್ರೀನಿವಾಸ್ ಎಂ.ಕೆ.ಉಪನ್ಯಾಸಕ ಡಾ.ಸಿರಾಜಶೇಖರ್, ಬೈಲುಕುಪ್ಪೆ ಪೊಲೀಸ್ ಠಾಣೆಯ ಎಎಸ್‌ಐ ಸೋಮಶೇಖರ್, ಬೈಲುಕುಪ್ಪೆ ಗ್ರಾಪಂ ಸದಸ್ಯ ಮಂಜುಳಾ ಇದ್ದರು.