ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿಯುವುದು ಎಲ್ಲರೂ ಜವಾಬ್ದಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್‌ಕುಮಾರ್.ಜಿ ತಿಳಿಸಿದರು.
ಗೊಡ್ಡಗಟ್ಟಿಕನಬ್ಬೆ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘದ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ-2024 ಅಡಿ ಮಕ್ಕಳ ಹಕ್ಕುಗಳ ವಿಚಾರದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ಭ್ರಷ್ಟಾಚಾರ ಒಂದು ರೀತಿಯ ಕ್ಯಾನ್ಸರ್‌ನಂತೆ, ಇದರಿಂದ ನ್ಯಾಯದ ತೆ ಹಕ್ಕನ್ನು ಪಡೆಯಲಾಗದು. ಮಕ್ಕಳಿಗೆ ಕಾನೂನು ಅರಿವಿಲ್ಲದೆ ಕೆಟ್ಟ ಚಟಗಳಿಗೆ ಬಲಿಯಾಗುವುದು, ಆಮಿಷಗಳಿಗೆ ಒಳಗಾಗಿ ಸಮಾಜಘಾತಕ ಚಟುವಟಿಕೆಯಲ್ಲಿ ಭಾಗಿಯಾಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಮಕ್ಕಳಿಗೆ ಬೇಕಾದ ಸಲಹೆ ಹಾಗೂ ಸಹಾಯ ಮಾಡಲು ಸಿದ್ಧರಿದ್ದೇವೆ ಎಂದರು.
18 ವರ್ಷ ಒಳಪಟ್ಟ ಮಕ್ಕಳು ವಾಹನ ಚಾಲನೆ ಮಾಡಬಾರದು, ಚಾಲನೆ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದಲ್ಲಿ ಮಕ್ಕಳ ಬದಲಿಗೆ ಅವರ ಪಾಲಕರಿಗೆ ಶಿಕ್ಷೆ ಹಾಗೂ ದಂಡ ವಿಧಿಸಲಾಗುವುದು. ಇಂದಿನ ತಂತ್ರಜ್ಞಾನದಿಂದ ಮಕ್ಕಳು ಜ್ಞಾನಕ್ಕಿಂತ ಹೆಚ್ಚು ಅಜ್ಞಾದ ವಿಚಾರಗಳನ್ನು ಹೆಚ್ಚು ಮೈಗೂಡಿಸಿಕೊಳ್ಳುತಿದ್ದಾರೆ. ೇಸ್‌ಬುಕ್ ಬದಲು ಪುಸ್ತಕ ಓದಿದರೆ ಹೆಚ್ಚು ಲಾಭ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಭೋಲಾ ಪಂಡಿತ್ ಮಾತನಾಡಿ, ಪ್ರಪಂಚದಲ್ಲಿ ಎರಡು ಮಹಾಯುದ್ದಗಳು ನಡೆದ ನಂತರ ವಿಶ್ವಸಂಸ್ಥೆಯನ್ನು 1945ರಲ್ಲಿ ಸ್ಥಾಪನೆ ಮಾಡಲಾಯಿತು, ಅದರಲ್ಲಿ ಪ್ರಪಂಚದ 197 ಸದಸ್ಯ ರಾಷ್ಟ್ರಗಳಿದ್ದು, ಇದರಲ್ಲಿ ಮಕ್ಕಳಿಗಾಗಿ 10 ಹಕ್ಕುಗಳನ್ನು ನೀಡಿ ಎಲ್ಲ ರಾಷ್ಟ್ರಗಳಲ್ಲೂ ಜಾರಿ ಮಾಡಲಾಗಿದೆ, ಮಕ್ಕಳಿಗೆ ಮೊದಲು 6 ರಿಂದ 14 ವರ್ಷದವರೆಗೆ ಉಚಿತ ಕಡ್ಡಾಯ ಶಿಕ್ಷಣ, ಬಾಲ್ಯವಿವಾಹ ತಡೆ, ಪೋಕ್ಸೋ ಕಾಯ್ದೆಯಡಿ ಮಕ್ಕಳ ಮೇಲಿನ ದೌರ್ಜನ್ಯ ತಡೆಯುವುದು, ಬಾಲಾಪರಾಧ ತಡೆಗೆ ಕಾಯ್ದೆ ಹೀಗೆ 10 ಹಕ್ಕುಗಳನ್ನು ಜಾರಿ ಮಾಡಲಾಗಿದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಂ.ವೆಂಕಟಸ್ವಾಮಿ ಮಾತನಾಡಿ, ಕಾನೂನು ಅರಿವು ಕಾರ್ಯಕ್ರಮ ಮಕ್ಕಳೊಂದಿಗೆ ಹಂಚಿಕೊಂಡಲ್ಲಿ ಹಿರಿಯರಿಗೆ ಬುದ್ದಿ ಹೇಳಿ ತಿದ್ದುವ ಕೆಲಸವಾಗುತ್ತದೆ ಎಂದರು.
ಸಂಪನ್ಮೂಲವ್ಯಕ್ತಿ ರಾಜಣ್ಣ ಮಕ್ಕಳ ಹಕ್ಕುಗಳ ಬಗ್ಗೆ ಮಾತನಾಡಿದರು.