ಜಿಲ್ಲೆ

ಸಮಾಜ ಪರಿವರ್ತನೆಗೆ ಯುವಜನರು ಮುಂದಾಗಲಿ

ಎ. ಆರ್. ರಘುರಾಮ

ಆಲೂರು : ಸಮಾಜ ಪರಿವರ್ತನೆಗೆ ಯುವಜನರು ಮುಂದಾಗಬೇಕು ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಎಂ. ಸಿ. ನಿರ್ಮಲಾ ಹೇಳಿದರು. ಪಟ್ಟಣದಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಖಿಲ ಭಾರತ ಮಾನವ ಹಕ್ಕುಗಳ ಪರಿಷತ್ ಮತ್ತಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾನೂನು ಅರಿವು ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಹಿರಿಯ ವಕೀಲ ಬಿ.ಮಂಜೇಗೌಡ ಮಾತನಾಡಿ, ಕಾನೂನು ನಮ್ಮ ಜೀವನದ ಅವಿಭಾಜ್ಯ ಅಂಗ. ನಾವು ಮಾನವೀಯತೆಯಿಂದ ಕರ್ತವ್ಯ ನಿರ್ವಹಿಸಿದಾಗ ಮಾತ್ರ ಸಂವಿಧಾನಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಆರೋಗ್ಯ ತಪಾಸಣೆ:ಇದೇ ಸಂದರ್ಭ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಸಲಾಯಿತು. ನೂರಾರು ಜನರು ತಪಾಸನೆಗೆ ಒಳಗಾದರು. ಪಿಎಸ್‌ಐ ಜಾನಬಾಯಿ ಕಡಪಟ್ಟಿ, ಮಾನವ ಹಕ್ಕುಗಳ ಪರಿಷತ್ ಜಿಲ್ಲಾಧ್ಯಕ್ಷ ಅನ್ವರ್ ಪಾಷ, ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ. ಬಸವರಾಜ ಸಾಗರ್, ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಸುರೇಶ್ ಇತರರು ಇದ್ದರು.