HANUMANT 
ಜಿಲ್ಲೆ

ದೇವಸ್ಥಾನ ನಿರ್ಮಾಣ ಮಾಡದಿದ್ದರೆ ಕಾನೂನು ಕ್ರಮ-ಹನುಮಂತ

 ರಾಯಚೂರು ನಗರದ ಮಾವಿನ ಕೆರೆ ಬಳಿ ಭೋವಿ ಸಮಾಜದಿಂದ ನಿರ್ಮಿಸಲು ಉದ್ದೇಶಿಸಿದ್ದ ಶ್ರೀಸಿದ್ದರಾಮೇಶ್ವರ ದೇವಸ್ಥಾನ ಮೂರು ವರ್ಷದಿಂದ ಅಪೂರ್ಣವಾಗಿ ಉಳಿದಿದ್ದು ಹಿಂದಿನ ಅಧ್ಯಕ್ಷ ನಾರಾಯಣಸ್ವಾಮಿ ಮತ್ತು ಲಕ್ಷ್ಮಣ ಇವರು ಸಮಾಜದ ಅನುದಾನದಿಂದ ಕಾಮಗಾರಿ ನಿರ್ಮಾಣ ಮಾಡದೇ ಇದ್ದಾರೆ ಕಾನೂನು ಕ್ರಮಕ್ಕೆ ಮುಂದಾಗುವದಾಗಿ ಜಿಲ್ಲಾಧ್ಯಕ್ಷ ಹನುಮಂತು ರಾಮನಗರ ಎಚ್ಚರಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇವಸ್ಥಾನ ನಿರ್ಮಾಣಕ್ಕೆ 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. 17 ಲಕ್ಷ ರೂ ಗಳನ್ನು ನಗರಸಭೆ ಅನುದಾನದಲ್ಲಿ ನಿರ್ಮಿಸಲಾಗಿದೆ. ಉಳಿದ 8 ಲಕ್ಷ ರೂ ಹಣವನ್ನು ಸಮಾಜ ಜನರಿಂದ ಸಂಗ್ರಹಿಸಿ ನೀಡಲಾಗಿತ್ತು.

ಈಗ ಕಾಮಗಾರಿ ಪ್ರಾರಂಭಿಸುವಂತೆ ಕೇಳಿದರೆ ಹಣವೇ ಇಲ್ಲ. ಕಾಮಗಾರಿ ಮಾಡಲು ಆಗುವದಿಲ್ಲ ಎಂದು ನಾರಾಯಣಸ್ವಾಮಿ ಹೇಳುತ್ತಿದ್ದಾರೆ. ಆದರೆ ಸಮಾಜ ಹಣವನ್ನು ದುರ್ಬಳಕೆ ಮಾಡಿಕೊಂಡು ದೇವಸ್ಥಾನ ಅಪೂರ್ಣವಾಗಲು ಕಾರಣವಾಗಿದ್ದಾರೆ. ಕೂಡಲೇ ಕಾಮಗಾರಿ ಪ್ರಾರಂಭಿಸಬೇಕು. ದೇವಸ್ಥಾನ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ನಾರಾಯಣಸ್ವಾಮಿಯವರು ಹಣ ಕೇಳಿದ್ದರಿಂದ ರಾಜೀನಾಮೆ ನೀಡುವಂತೆ ಹೇಳಿ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ.

ಸಭೆ ಮಾಹಿತಿ ನೀಡದೇ ಚುನಾವಣೆಯ ಮೂಲಕ ಆಯ್ಕೆಯಾದ ಅಧ್ಯಕ್ಷರ ಅಧೀಕಾರವನ್ನು ದು ರುಪಯೋಗಪಡೆಸಿಕೊಳ್ಳುತ್ತಿದ್ದಾರೆ. ಸಮಾಜ ಜನರಿಗೆ ತಪ್ಪು ಮಾಹಿತಿನೀಡಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಒಂದು ತಿಂಗಳೊಳಗೆ ಕಾಮಗಾರಿ ಪ್ರಾರಂಭಿಸದೇ ಹೋದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಈರಣ್ಣ ಕಸ್ಬೆ ಕ್ಯಾಂಪ್, ಬಿ.ವೀರೇಶ, ಮಡ್ಡಿಪೇಟೆ ಈರಣ್ಣ ,ಗೋವಿಂದ, ರವಿ ಕುರ್ಡಿ ಇದ್ದರು.