ಜಿಲ್ಲೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಪ್ರಸಿನ್ ಕೆ.ಆರ್

ಗೋಣಿಕೊಪ್ಪ: ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಸಮ್ಮುಖದಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಪೊನ್ನಂಪೇಟೆ ತಾಲೂಕು ಬಗರ್ ಹುಕುಂ ಸಕ್ರಮೀಕರಣ ಸಮಿತಿ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಉಪಸ್ಥಿತಿಯಲ್ಲಿ ಬಿರುನಾಣಿಯಲ್ಲಿ ಬಿಜೆಪಿ ಪಕ್ಷದ ಪ್ರಮುಖರು ಸೇರಿದಂತೆ 13 ಕಾರ್ಯಕರ್ತರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಬಿರುನಾಣಿ ಬಿಜೆಪಿ ಬೂತ್ ಮಾಜಿ ಅಧ್ಯಕ್ಷ ಕರ್ತಮಾಡ ಮಿಲನ್ ಮೇದಪ್ಪ, ಬಿರುನಾಣಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಬೊಟ್ಟಂಗಡ ಗಿರೀಶ್ ಪೆಮ್ಮಯ್ಯ, ಅಣ್ಣೀರ ಪ್ರವೀಣ್, ಚೋನೀರ ಜೀವನ್, ಕರ್ತಮಾಡ ಬಿಪಿನ್, ಅಣ್ಣೀರ ಗಪ್ಪಣ್ಣ, ಚಂಗಣಮಾಡ ಜೀವನ್, ತೊತ್ತೆರ ರಾಜ, ಬೀರುಗ ಗ್ರಾಮದ ಅಣ್ಣಳಮಾಡ ಗಿರೀಶ್, ಕೆ.ಸಿ.ಗಪ್ಪು, ಆಂಟನಿ, ಕರ್ತಮಾಡ ರೋಹಿತ್, ಬೊಟ್ಟಂಗಡ ರೀಟಾ ಅವರು ಬುಧವಾರ ಕಾಂಗ್ರೆಸ್ ಸೇರ್ಪಡೆಗೊಂಡರು.
ವಲಯ ಕಾಂಗ್ರೆಸ್ ಅಧ್ಯಕ್ಷ ಕುಪ್ಪಣ ಮಾಡ ಪ್ರೀತಮ್, ಬುಟ್ಟಿಯಂಡ ತಂಬಿ ನಾಣಯ್ಯ, ಬೊಳ್ಳೇರ ಅಪ್ಪುಟ ಪೊನ್ನಪ್ಪ ಇದ್ದರು.