ಜಿಲ್ಲೆ

ಗುಡಿದೊಡ್ಡಿ ಡೇರಿಗೆ ಲೀಲಮ್ಮ ಅಧ್ಯಕ್ಷೆ

ಮದ್ದೂರು: ತಾಲೂಕಿನ ಗುಡಿದೊಡ್ಡಿ ಗ್ರಾಮದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾಗಿ ಕೆ.ಎಂ.ಲೀಲಮ್ಮ ಚನ್ನೇಶ್, ಉಪಾಧ್ಯಕ್ಷರಾಗಿ ತಾಯಮ್ಮ ತಿಮ್ಮೇಗೌಡ ಅವಿರೋಧ ಆಯ್ಕೆಯಾದರು.


ಸಂಘದ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಕ್ರಿಯೆಯಲ್ಲಿ ಇಬ್ಬರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಸುಮಿತ್ರಾ ಅವಿರೋಧ ಆಯ್ಕೆ ಘೋಷಣೆ ಮಾಡಿದರು.


ಅಧ್ಯಕ್ಷೆ ಕೆ.ಎಂ.ಲೀಲಮ್ಮ ಚನ್ನೇಶ್ ಮಾತನಾಡಿ, ಹಾಲು ಉತ್ಪಾದಕರ ಸಹಕಾರ ಸಂಘದಿಂದ ರೈತ ಮಹಿಳೆಯರಿಗೆ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ದೊರಕಿಸಿಕೊಡಲಾಗುವುದು. ಸಂಘದ ಷೇರುದಾರರಿಗೆ ಉಪಯುಕ್ತವಾಗುವ ಕಾರ್ಯಕ್ರಮ ರೂಪಿಸಿ ಅನುಷ್ಠಾನ ಮಾಡಲಾಗುವುದು ಎಂದರು.


ಗುಡಿದೊಡ್ಡಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉಪಾಧ್ಯಕ್ಷೆ ತಾಯಮ್ಮ ತಿಮ್ಮೇಗೌಡ, ನಿರ್ದೇಶಕರಾದ ಸವಿತಾ, ನಾಗಮ್ಮ, ಸುಧಾ, ವಸಂತಾ, ಪ್ರೇಮಾ, ಶೋಭಾ, ಸವಿತಾ, ಗೌರಮ್ಮ , ಸರ್ಕಾರದ ನಾಮನಿರ್ದೇಶಿತ ನಿರ್ದೇಶಕಿ ವಸಂತಾ, ಸಿಇಒ ಲಕ್ಷ್ಮೀ ಚನ್ನರಾಜು ಇದ್ದರು.