ಜಿಲ್ಲೆ

ಬೈಕ್ ಗಳಿಗೆ ಎಲ್‌ಇಡಿ ಲೈಟ್‌ : 23 ಪ್ರಕರಣ ದಾಖಲು, 13 ಸಾವಿರ ದಂಡ ಆಕರಣೆ

Uttara Kannada - Subash Hegde

ಶಿರಸಿ: ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಇತ್ತಿಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ನಿಯಂತ್ರಿಸುವ ಸಲುವಾಗಿ  ಶುಕ್ರವಾರ ಸಂಜೆ ನಗರ ಠಾಣೆಯ ಪೊಲೀಸರು ನಿಲೇಕೆಣಿ ನಾಕಾದಲ್ಲಿ ವಿಶೇಷ ಸಂಚಾರ ಡ್ರೈವ್ ಕಾರ್ಯಾಚರಣೆ  ಹಮ್ಮಿಕೊಂಡು ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರ ವಿರುದ್ದ  ಒಟ್ಟು 54 ಪ್ರಕರಣಗಳನ್ನು ದಾಖಲಿಸಿ 28,500 ರೂ  ದಂಡ ವಿಧಿಸಿದ್ದಾರೆ.

ವಾಹನಗಳಿಗೆ ಹೆಚ್ಚಿನ ಪ್ರಖರತೆವುಳ್ಳ ಎಲ್ಇಡಿ ಲೈಟ್ ಗಳನ್ನು ಅಳವಡಿಸಿಕೊಂಡು ವಾಹನ ಚಲಾಯಿಸುವ ಸವಾರರ ಮೇಲೆ ಕಾರ್ಯಾಚರಣೆ ಮುಂದುವರೆಸಿ ಐಎಂವಿ ಕಾಯ್ದೆಯಡಿ ಒಟ್ಟು 23  ಪ್ರಕರಣ ದಾಖಲಿಸಿ 13‌ಸಾವಿರ ರೂ ದಂಡ ವಿಧಿಸಿದ್ದಾರೆ

ಡಿವೈಎಸ್ಪಿ ಗಣೇಶ ಕೆ‌.ಎಲ್.,ಶಿರಸಿ ವೃತ್ತ ನಿರೀಕ್ಷಕ  ಶಶಿಕಾಂತ ವರ್ಮಾ ರವರ ಮಾರ್ಗದರ್ಶನದಲ್ಲಿ ಶಿರಸಿ ನಗರ ಠಾಣೆಯ ಪಿಎಸ್ಐ ನಾಗಪ್ಪ ಬಿ. ನೇತೃತ್ವದಲ್ಲಿ ಎಎಸ್ಐಗಳಾದ ಹೊನ್ನಪ್ಪ ಅಗೇರ,ನೆಲ್ಸನ್ ಮೆಂಥಾರೋ,ಸಿಬ್ಬಂದಿ ಹನುಮಂತ ಕಬಾಡಿ,ಮಂಜುನಾಥ ಕಾಶಿಕೊವಿ,ಚನ್ನಬಸಪ್ಪ ರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.