ಜಿಲ್ಲೆ

ಉಪನ್ಯಾಸ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ), ಜಿಲ್ಲಾಡಳಿತ, ಇತಿಹಾಸ ಉಪನ್ಯಾಸಕರ ಸಂಘ ಹಾಗೂ ಕೆ.ಇ. ಬೋಡಿರ್ನ ಸಂಯುಕ್ತ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಆ. 8ರಂದು ಬೆಳಗ್ಗೆ 10.30ಕ್ಕೆ ಅವಿಭಜಿತ ಧಾರವಾಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರ್ತಿ ದಿ. ಕೃಷ್ಣಾಬಾಯಿ ಪಣಜೀಕರ್​ ಕುರಿತು ಕಾಲೇಜಿನಲ್ಲಿ ಉಪನ್ಯಾಸ ಏರ್ಪಡಿಸಲಾಗಿದೆ.
ಕೆ.ಇ. ಬೋಡಿರ್ನ ಕಾರ್ಯದರ್ಶಿ ಡಾ. ಡಿ.ಎಸ್​. ರಾಜಪುರೋಹಿತ ಕಾರ್ಯಕ್ರಮ ಉದ್ಘಾಟಿಸುವರು. ಅರುಣಕುಮಾರ ಗಂಜಿಗಟ್ಟಿ ಉಪನ್ಯಾಸ ನೀಡುವರು. ಪ್ರಕಾಶ ಸುಣಗಾರ ಉಪಸ್ಥಿತರಿರುವರು. ಕಾಲೇಜಿನ ಪ್ರಾಚಾರ್ಯೆ ಸುನಿತಾ ಕಡಪಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.