ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಕುಸುಮ ವಿಠ್ಠಲರಾವ್ ದೇಶಪಾಂಡೆ ಸ್ಮರಣಾರ್ಥ ದತ್ತಿ ನಿಮಿತ್ತ ಫೆ. 17ರಂದು ಸಂಜೆ 6 ಗಂಟೆಗೆ ಅಮ್ಮನೆಂಬ ಅಂತರಂಗ ಉಪನ್ಯಾಸ ಹಾಗೂ ಶ್ರೇಷ್ಠ ತಾಯಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದೆ.
ನಾಟಕಕಾರ ಡಾ. ದಿವಾಕರ ಹೆಗಡೆ ಅತಿಥಿ ಉಪನ್ಯಾಸಕರಾಗಿ ಆಗಮಿಸುವರು. ಶ್ರೇಷ್ಠ ತಾಯಿ ಗೌರವ ಸನ್ಮಾನವನ್ನು ಅನುರಾಧಾ ವೆಂಕಟೇಶ ಪ್ರಭು ಸ್ವೀಕರಿಸುವರು. ದತ್ತಿದಾನಿ ಡಾ. ರಾಜನ್ ದೇಶಪಾಂಡೆ ಉಪಸ್ಥಿತರಿರುವರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.