ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಜ. 12ರಂದು ಬೆಳಗ್ಗೆ 10.30ಕ್ಕೆ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಗಳಗನಾಥ ಹಾಗೂ ನಾ.ಶ್ರೀ ರಾಜಪುರೋಹಿತ ಸ್ಮರಣಾರ್ಥ ದತ್ತಿ ಉದ್ಘಾಟನೆ ಹಾಗೂ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ.
ಮನೋಹರ ಗ್ರಂಥಮಾಲಾ ಹಿರಿಯ ಪ್ರಕಾಶಕ ರಮಾಕಾಂತ ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಸಾಹಿತಿ ಹರ್ಷ ಡಂಬಳ ಗಳಗನಾಥರ ಬದುಕು-ಬರಹ ಮತ್ತು ಡಾ. ಗುರುಪಾದ ಮರಿಗುದ್ದಿ ಅಪ್ರತಿಮ ಸಂಶೋಧಕ ನಾ.ಶ್ರೀ. ರಾಜಪುರೋಹಿತ ಕುರಿತು ಉಪನ್ಯಾಸ ನೀಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಗಳಗನಾಥ ಹಾಗೂ ನಾ.ಶ್ರೀ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ದುಷ್ಯಂತ ನಾಡಗೌಡ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.