ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಜ. 10ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಡಾ. ಎಂ.ಎಸ್. ಸುಂಕಾಪುರ ದತ್ತಿ ನಿಮಿತ್ತ ಡಾ. ಎಂ.ಎಸ್. ಸುಂಕಾಪುರ ಅವರ ಜೀವನ-ಸಾಧನೆ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದೆ.
ಹಿರಿಯ ಸಾಹಿತಿ ಡಾ. ಆರ್.ಬಿ. ಚಿಲುಮಿ ಉಪನ್ಯಾಸಕರಾಗಿ ಆಗಮಿಸುವರು. ನಿವೃತ್ತ ಇಂಜಿನಿಯರ್ ಎಫ್.ಐ. ಚನ್ನಪ್ಪಗೌಡರ ಅಧ್ಯಕ್ಷತೆ ವಹಿಸುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.