ಜಿಲ್ಲೆ

ಉಪನ್ಯಾಸ ಇಂದು

Dharwada - Vikram Nadiger

ಧಾರವಾಡ: ವಕೀಲರ ದಿನ, ಹಿರಿಯ ನ್ಯಾಯವಾದಿ ಎಂ. ಜಿ. ಅಗಡಿ ಸಂಸ್ಮರಣೆ ಅಂಗವಾಗಿ ಕರ್ನಾಟಕ ವಿದ್ಯಾವರ್ಧಕ ಸಂಘವು ಡಿ. 3ರಂದು ರಾ.ಹ. ದೇಶಪಾಂಡೆ ಭವನದಲ್ಲಿ ಕಾನೂನು ವೃತ್ತಿ: ಅವಕಾಶಗಳು-ಸವಾಲುಗಳು ಉಪನ್ಯಾಸ ಏರ್ಪಡಿಸಿದೆ.

ಅತಿಥಿಗಳಾಗಿ ಧಾರವಾಡ ಕರ್ನಾಟಕ ವಿಶ್ವ ವಿದ್ಯಾಲಯ ಕಾನೂನು ನಿಖಾಯದ ಡೀನ ಡಾ. ಎಂ. ವಿಶ್ವನಾಥ ಆಗಮಿಸುವರು. ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚುವರಿ ಅಡ್ವೋಕೇಟ ಜನರಲ್​ ಜೆ.ಎಂ. ಗಂಗಾಧರ ಅಧ್ಯಕ್ಷತೆ ವಹಿಸುವರು ಎಂದು ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ತಿಳಿಸಿದ್ದಾರೆ.