ಜಿಲ್ಲೆ

ಉಪನ್ಯಾಸ ಇಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಡಿ. 2ರಂದು ಸಂಜೆ 5.30ಕ್ಕೆ ರಾ.ಹ. ದೇಶಪಾಂಡೆ ಭವನದಲ್ಲಿ ಬಸಪ್ಪ ಮುಂದಿನಮನಿ ಸ್ಮರಣೆ ದತ್ತಿ ನಿಮಿತ್ತ ಕೃಷಿ ಬಿಕ್ಕಟ್ಟುಗಳು ಉಪನ್ಯಾಸ ಹಾಗೂ ಬಸವಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಏರ್ಪಡಿಸಿದೆ.

ಅತಿಥಿ ಉಪನ್ಯಾಸಕರಾಗಿ ಹೊಸತು ಮಾಸ ಪತ್ರಿಕೆ ಸಂಪಾದಕ ಡಾ. ಸಿದ್ಧನಗೌಡ ಪಾಟೀಲ ಅಗಮಿಸುವರು. ತಾಲೂಕಿನ ಮರೇವಾಡದ ಬಸಪ್ಪ ದೊಡ್ಡಮಲ್ಲಪ್ಪ ಸಲಕಿ ಬಸವ ಕೃಷಿ ಪ್ರಶಸ್ತಿ ಸ್ವೀಕರಿಸುವರು. ರಾಯಚೂರ ವಿವಿ ಕುಲಸಚಿವ ಪ್ರೊ. ವಿಶ್ವನಾಥ ಎಂ. ಅತಿಥಿಗಳಾಗಿ ಆಗಮಿಸುವರು. ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್​. ಕಿರೇಸೂರ ಅಧ್ಯಕ್ಷತೆ ವಹಿಸುವರು. ದತ್ತಿದಾನಿ ಸದಾನಂದ ಮುಂದಿನಮನಿ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.