ವಿಜಯವಾಣಿ ಸುದ್ದಿಜಾಲ ಧಾರವಾಡ
ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರೊ. ಸಿ.ಆರ್. ಯರವಿನತೆಲಿಮಠ ದತ್ತಿ ನಿಮಿತ್ತ ಅ. 10ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಶೂನ್ಯ ಸಂಪಾದನೆಯ ಅನುವಾದ: ಸಾಮಾಜಿಕ ಇತಿಹಾಸದ ಒಳನೋಟಗಳು ಕುರಿತು ಉಪನ್ಯಾಸ ಏರ್ಪಡಿಸಿದೆ.
ತುಮಕೂರು ವಿಶ್ವ ವಿದ್ಯಾಲಯದ ಇಂಗ್ಲಿಷ ಪ್ರಾಧ್ಯಾಪಕ ಡಾ. ಎನ್.ಎಸ್. ಗುಂಡೂರ ಉಪನ್ಯಾಸಕರಾಗಿ ಆಗಮಿಸುವರು. ಹಿರಿಯ ವೈದ್ಯ ಡಾ. ಎಸ್.ಆರ್. ರಾಮನಗೌಡರ ಅಧ್ಯಕ್ಷತೆ ವಹಿಸುವರು. ಡಾ. ಸಿ.ಆರ್. ಯರವಿನತೆಲಿಮಠ ಹಾಗೂ ಬೆಳಗಾವಿಯ ಡಾ. ಗುರುದೇವಿ ಹುಲೆಪ್ಪನವರಮಠ ಗೌರವ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.