ಜಿಲ್ಲೆ

ರಾಜ್ಯೋತ್ಸವ ಹಿನ್ನೆಲೆಯಲ್ಲಿ ಉಪನ್ಯಾಸ, ಗೀತ ಗಾಯನ

ಗುಳೇದಗುಡ್ಡ: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ತಾಲೂಕು ಆಡಳಿತ ಮತ್ತು ಕನ್ನಡ ಸಾಹಿತ್ಯ ಪರಿಷತ್​ ಸಹಯೋಗದಲ್ಲಿ ಉಪನ್ಯಾಸ, ಕೃತಿ ಅವಲೋಕನ, ಮಕ್ಕಳಿಂದ ಕನ್ನಡ ರಸಪ್ರಶ್ನೆ, ಕರ್ನಾಟಕ ಏಕೀಕರಣ ನಂತರ ಕನ್ನಡದ ಸ್ಥಿತಿಗತಿ ಕುರಿತು ಭಾಷಣ, ಕನ್ನಡ ಗೀತ ಗಾಯನ, ಕನ್ನಡ ಸಮೂಹ ಗೀತೆಗಳ ನೃತ್ಯ ಕಾರ್ಯಕ್ರಮಗಳು ನಡೆಯಲಿವೆ.

ನ.11 ರಂದು ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಜ್ಞಾನಪೀಠ ಪುರಸತರ ಬದುಕು ಬರಹ ಕುರಿತು ಪ್ರೊ. ಈರಣ್ಣ ದೊಡಮನಿ ಉಪನ್ಯಾಸ ನಡೆಯಲಿದೆ.

ನಂಜುಂಡಿ ಆತ್ಮಕಥನದ ಕೃತಿ ಅವಲೋಕನ, ನ.13 ರಂದು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುಳೇದಗುಡ್ಡ ಪರಿಸರದ ಸಾಹಿತಿಗಳ ಕುರಿತು ಡಾ. ಚಂದ್ರಶೇಖರ ಕಾಳನ್ನವರ ಉಪನ್ಯಾಸ ನೀಡುವರು. ನ.15ರಂದು ಅಶೋಕ ಹೆಗಡೆ ಬರೆದ ಗುಳೇದಗುಡ್ಡ ತಾಲೂಕು ದರ್ಶನ ಕೃತಿ ಕುರಿತು ವಿಶೇಷ ತಹಸೀಲ್ದಾರ್​ ಮಹೇಶ ಗಸ್ತಿ ಅವಲೋಕನ ಮಾಡಲಿದ್ದಾರೆ. ನ.19ರಂದು ವೆಂಕಟೇಶ ಪ್ರೌಢಶಾಲೆಯಲ್ಲಿ ಗುಳೇದಗುಡ್ಡ ಪರಿಸರದ ಸೋಬಾನ ಪದಗಳ ಕುರಿತು ಸಂಶೋಧಕಿ ಡಾ. ಶಕುಂತಲಾ ಬರಗಿ ಉಪನ್ಯಾಸ ನೀಡುವರು. ನ.21 ರಂದು ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ ಗುಳೇದಗುಡ್ಡದ ಪರಿಸರದ ರಂಗಭೂಮಿ ಪರಿಚಯ ಕುರಿತು ಡಾ. ಸಿ.ಎಂ.ಜೋಶಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ನ.29ರ ವರೆಗೆ ವಿವಿಧ ಕಾರ್ಯಕ್ರಮ ನಡೆಯಲಿವೆ.

ನ.30 ರಂದು ನುಡಿಹಬ್ಬ ಕಾರ್ಯಕ್ರಮ ನಡೆಯಲಿದ್ದು, ಶಾಸಕ ಭೀಮಸೇನ ಚಿಮ್ಮನಕಟ್ಟಿ ಅಧ್ಯತೆ ವಹಿಸುವರು. ತಹಸೀಲ್ದಾರ್​ ಮಂಗಳಾ ಎಂ. ಉದ್ಘಾಟಿಸುವರು. ತಾಲೂಕಿನ ವಿವಿಧ ೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಕಾರ್ಯಕ್ರಮದ ಪ್ರಾಯೋಜಕರಿಗೆ ಸನ್ಮಾನ, ಕರ್ನಾಟಕ ಏಕೀಕರಣ ನಂತರ ಕನ್ನಡದ ಸ್ಥಿತಿಗತಿ ಕುರಿತು ಭಾಷಣ, ಶಾಲಾ ವಿದ್ಯಾರ್ಥಿಗಳಿಂದ ಕನ್ನಡ ಸಮೂಹ ಗೀತೆಗಳ ನೃತ್ಯ ಸ್ಪರ್ಧೆ ನಡೆಯಲಿವೆ.