ಜಿಲ್ಲೆ

ಉಪನ್ಯಾಸ ಕಾರ್ಯಕ್ರಮ ನಾಳೆ

ಗಾಯತ್ರಿ ಮಾಲಿಪಾಟೀಲ್

ಅಳವಂಡಿ: ಗ್ರಾಮದ ವಿವೇಕಾನಂದ ಪ್ರೌಢಶಾಲೆಯಲ್ಲಿ ಜಿಲ್ಲೆ, ತಾಲೂಕು ಹಾಗೂ ಅಳವಂಡಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಜು.9ರಂದು ‘ಕನ್ನಡ ಸಾಹಿತ್ಯದಲ್ಲಿ ಯುವಕರ ಪಾತ್ರ’ ವಿಷಯ ಕುರಿತು ಉಪನ್ಯಾಸ ಹಾಗೂ ಸಾಹಿತಿ ವೀಣಾ ಪಾಟೀಲ್‌ಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಹಿತಿಗಳಾದ ವೀಣಾ ಪಾಟೀಲ್ ಹಾಗೂ ನೀಲಪ್ಪ ಹಕ್ಕಂಡಿ ಉಪನ್ಯಾಸ ನೀಡಲಿದ್ದಾರೆ. ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ ಅಧ್ಯಕ್ಷತೆ ವಹಿಸಲಿದ್ದಾರೆ. ಖಾಸಗಿ ಶಾಲೆಯೊಂದರ ಸಂಸ್ಥಾಪಕ ಬಸವರಾಜ ತಳಕಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಳಾಗಿ ಗ್ರಾಪಂ ಉಪಾಧ್ಯಕ್ಷೆ ಶಾರಮ್ಮ ಇಳಿಗೇರ, ಮುಖ್ಯಶಿಕ್ಷಕ ರಫಿಕ್ ಬಳಿಗಾರ, ಸಾಹಿತಿಗಳಾದ ಬಿ.ಎನ್.ಹೊರಪೇಟೆ, ಕಿರಣ ಕುಮಾರ ಅಂಗಡಿ, ಕಸಾಪ ತಾಲೂಕಾಧ್ಯಕ್ಷ ರಾಮಚಂದ್ರಗೌಡ ಗೊಂಡಬಾಳ, ಪ್ರತಿಭಾ ಮೇಟಿ ಇತರರು ಆಗಮಿಸಲಿದ್ದಾರೆ ಎಂದು ಕಸಾಪ ಅಳವಂಡಿ ಹೋಬಳಿ ಘಟಕದ ಅಧ್ಯಕ್ಷ ಸುರೇಶ ಸಂಗರಡ್ಡಿ ತಿಳಿಸಿದ್ದಾರೆ.