ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಗ್ರ ವೇದ ರಾಶಿಗಳನ್ನು ವಿಂಗಡಿಸಿ 4 ವಿಭಾಗಗಳಲ್ಲಿ ರಚಿಸಿ, ಸರಳೀಕರಣ ಮಾಡಿ ನೀಡಿದವರು ಮಹರ್ಷಿ ವೇದವ್ಯಾಸರು. ವಿಶ್ವಾಮಿತ್ರ ಮಹರ್ಷಿಗಳು ಸಕಲ ವೇದಗಳ ಸಾರವಾದ ಗಾಯತ್ರಿ ಮಂತ್ರವನ್ನು ಉಪದೇಶಿಸಿ ಮಹೋಪಕಾರ ಮಾಡಿದ್ದಾರೆ. ಗಾಯತ್ರಿ ಮಂತ್ರ ಜಪ ಮಾಡಿ ಜನ್ಮ ಸಾರ್ಥಕ ಮಾಡಿಕೊಳ್ಳಬೇಕು ಎಂದು ನ್ಯಾಯರತ್ನ ವಿದ್ವಾನ್ ಡಾ. ವಾಚಸ್ಪತಿ ಶಾಸ್ತಿç ಹೇಳಿದರು.
ನಗರದ ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ ಹನುಮಂತ ಬಿಜಾಪುರ ನಿವಾಸದಲ್ಲಿ ಮಹರ್ಷಿ ವೇದವ್ಯಾಸರ ಜಯಂತಿ, ಗುರುಪೂರ್ಣಿಮೆ ಅಂಗವಾಗಿ ಭಾನುವಾರ ಆಯೋಜಿಸಿದ್ದ ಗುರು ಮಹಿಮೆ ಕುರಿತು ಅವರು ಉಪನ್ಯಾಸ ನೀಡಿದರು.
ಆಷಾಢ ಪೂರ್ಣಿಮೆಯ ದಿನವೇ ಮಹರ್ಷಿ ವೇದವ್ಯಾಸರ ಜನ್ಮದಿನ. ಗುರುಪೂರ್ಣಿಮೆಯನ್ನು ಶ್ರದ್ಧಾ, ಭಕ್ತಿಯಿಂದ ಆಚರಿಸಬೇಕು. ಕಷ್ಟ ಕಾರ್ಪಣ್ಯಗಳು ಗುರುಗಳ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಪರಿಹಾರಿಸಲ್ಪಡುತ್ತವೆ ಎಂದರು.
ನಾರಾಯಣ ಪಾರಾಯಣ ಬಳಗದ ಸದಸ್ಯರಿಂದ ಶ್ರೀ ಹರಿವಾಯು ಗುರುಗಳ ಸ್ತೋತ್ರಗಳ ಪಾರಾಯಣ ಜರುಗಿತು. ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಾ. ಶ್ರೀನಾಥ, ಪ್ರೊ. ಸಿ.ಕೆ. ಕುಲಕರ್ಣಿ, ಡಾ. ರವಿ ಧುಮ್ಮವಾಡ, ಕೇಶವ ಕುಲಕರ್ಣಿ, ಎಲ್.ವಿ. ಜೋಶಿ, ಆನಂದ ದೇಶಪಾಂಡೆ, ಭೀಮಸೇನ ದಿಗ್ಗಾವಿ, ಸಂಜೀವ ಗೊಳಸಂಗಿ, ಅಶೋಕ ಕುಲಕರ್ಣಿ, ರಾಘವೇಂದ್ರ ಮುಂಡಗೋಡ, ಪಾಂಡುರAಗ ಕುಲಕರ್ಣಿ, ಇತರರಿದ್ದರು.