ಹುಬ್ಬಳ್ಳಿ: ವಿದ್ಯಾರ್ಥಿಗಳು ಉತ್ತಮ ಸಂವಹನ ಕೌಶಲ ಬೆಳೆಸಿಕೊಂಡರೆ ಭವಿಷ್ಯದಲ್ಲಿ ಹೆಚ್ಚಿನ ಯಶಸ್ಸು ಹಾಗೂ ಉದ್ಯೋಗಾವಕಾಶಗಳನ್ನು ಪಡೆಯಲು ಸಹಾಯವಾಗುತ್ತದೆ ಎಂದು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಕಾರ್ಯದರ್ಶಿ ಪ್ರೊ. ಕೆ.ಎಸ್. ಕೌಜಲಗಿ ಹೇಳಿದರು.
ಇಲ್ಲಿಯ ವಿದ್ಯಾನಗರ ಕೆಎಲ್ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಗರ ಟಕ ಮತ್ತು ಗ್ರಾಮ ಶಿಣ ಚಾರಿಟಿ ಫೌಂಡೇಷನ್ ಸಹಯೋಗದಲ್ಲಿ ಕರ್ನಾಟಕ ಸಂಭ್ರಮ-50ರ ಸವಿ ನೆನಪಿಗಾಗಿ ಶುಕ್ರವಾರ ಏರ್ಪಡಿಸಿದ್ದ ಉಪನ್ಯಾಸ ಮಾಲಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಭಾಷೆ ಕಲಿಸುವುದು ಕಷ್ಟದ ಕೆಲಸವಾಗಿದೆ. ಕೆಲವರಿಗೆ ಸಾಹಿತ್ಯ ಸುಲಭವಾಗಿರಬಹುದು. ವಿದ್ಯಾರ್ಥಿ ದೆಸೆಯಲ್ಲಿ ಬರೆಯುವ ರೂಢಿ ಮಾಡಿಕೊಂಡರೆ ಸಮಾಜದಲ್ಲೂ ಪರಿವರ್ತನೆ ತರುವ ಕಾರ್ಯ ಮಾಡಬಹುದು ಎಂದರು.
ಗ್ರಾಮ ಶಿಣ ಚಾರಿಟಿ ಫೌಂಡೇಷನ್ ಟ್ರಸ್ಟಿ ರವೀಂದ್ರ ಹೊಂಬಳ ಮಾತನಾಡಿ, ವಿದ್ಯಾಥಿರ್ಗಳು ಸಾಮಾಜಿಕ ಕಾರ್ಯಗಳಲ್ಲಿ ಹೆಚ್ಚಾಗಿ ಭಾಗವಹಿಸಬೇಕು. ಕನ್ನಡ ನಾಡು, ನುಡಿ ಮತ್ತು ಸಂಸತಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದರು.
ಸಾಹಿತಿ ರೂಪಾ ರವೀಂದ್ರ ಜೋಶಿ ಅವರು, ಬೋಧನೆಯಲ್ಲಿ ಭಾಷಾ ಪ್ರಭುತ್ವ ಮತ್ತು ಕೌಶಲಗಳು ಹಾಗೂ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ ಅವರು ಸುವರ್ಣ ಕರ್ನಾಟಕ ಒಂದು ಅವಲೋಕನ ಕುರಿತು ಪ್ರಬಂಧ ಮಂಡಿಸಿದರು.
ಪ್ರಾಚಾರ್ಯ ಡಾ. ಲಿಂಗರಾಜ ಮುಳ್ಳಳ್ಳಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಥಿರ್ ಸಂಘದ ಕಾರ್ಯಾಧ್ಯಕ್ಷೆ ಡಾ. ಜಯಶ್ರೀ ಕುಂದಗೋಳಮಠ ನೇತೃತ್ವ ವಹಿಸಿದ್ದರು.
ಸೌಮ್ಯ ಚೌಕಿಮಠ ಮತ್ತು ಸಂಗಡಿಗರು ಪ್ರಾಥಿರ್ಸಿದರು. ಪುಷ್ಪಾ ಕಮತರ ಮತ್ತು ಸೌಂದರ್ಯ ಸೋಮರೆಡ್ಡಿ ಅನಿಸಿಕೆ ವ್ಯಕ್ತಪಡಿಸಿದರು. ವರ್ಷಿಣಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಪೂಜಾ ಮುದೆನ್ನವರ ವಂದಿಸಿದರು.