ಜಿಲ್ಲೆ

ಸೊರಟೂರ ದತ್ತಿ ಉಪನ್ಯಾಸ

Dharwada - Basavaraj Idli

ಹುಬ್ಬಳ್ಳಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಪ್ರೋಬಸ್ ಕ್ಲಬ್ ವತಿಯಿಂದ ಬಸಪ್ಪ ವೀರಭದ್ರಪ್ಪ ಸೊರಟೂರ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಡಿ. 28ರಂದು ಬೆಳಗ್ಗೆ 10.30ಕ್ಕೆ ಇಲ್ಲಿಯ ರಾಜಧಾನಿ ಕಾಲನಿ ಗಣೇಶ ಹಾಗೂ ಈಶ್ವರ ದೇವಸ್ಥಾನ ಆವರಣದಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಡಾ. ಸ್ನೇಹಾ ಭೂಸನೂರ ಉಪನ್ಯಾಸ ನೀಡುವರು. ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಉಪಸ್ಥಿತರಿರುವರು. ಪ್ರೋಬಸ್ ಕ್ಲಬ್ ಅಧ್ಯಕ್ಷ ಆರ್.ಸಿ. ಹಲಗತ್ತಿ ಅಧ್ಯಕ್ಷತೆ ವಹಿಸುವರು.

ಹಿರಿಯ ಸದಸ್ಯರಿಗೆ ಸನ್ಮಾನ ಏರ್ಪಡಿಸಲಾಗಿದೆ ಎಂದು ಪರಿಷತ್ ಗೌರವ ಕಾರ್ಯದರ್ಶಿ ಚನ್ನಬಸಪ್ಪ ಧಾರವಾಡಶೆಟ್ಟರ್ ತಿಳಿಸಿದ್ದಾರೆ.