ಶ್ರೀ ಪಾರ್ಶ್ವನಾಥ ಪೂಜಾ ಸೇವಾ ಟ್ರಸ್ಟ್ ವತಿಯಿಂದ ವಾರ್ಷಿಕ ಪೂಜಾ ರಜತ ಮಹೋತ್ಸವ ಆಚರಣೆ ಅಂಗವಾಗಿ ಆಯೋಜಿಸಿರುವ ಒಂದು ವರ್ಷಗಳ ಕಾಲ ಸರಣಿ ಉಪನ್ಯಾಸ ಕಾರ್ಯಕ್ರಮದದಲ್ಲಿ ಮೈಸೂರು ವಿವಿ ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಅನಂತರಾಮು ಉಪನ್ಯಾಸ ನೀಡಿದರು.
ಜೆಎಲ್‌ಬಿ ರಸ್ತೆಯ ಜೈನ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಕೆ.ಅನಂತರಾಮು ಅವರು ‘ವಡ್ಡಾರಾಧನೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎಂ.ಪಿ.ನಾಭಿರಾಜ್, ಪ್ರಾಯೋಜಕರಾದ ಪುಷ್ಪಾ ರಮೇಶ್ ಇತರರಿದ್ದರು. 2026 ಮಾರ್ಚ್‌ವರೆಗೆ ಪ್ರತಿ ತಿಂಗಳ ಎರಡನೇ ಭಾನುವಾರ ಸಂಜೆ 4 ರಿಂದ 5.30ರ ವರೆಗೆ ಸರಣಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.