ಜಿಲ್ಲೆ

ಜೀವನಶೈಲಿ ಬದಲಾದರೆ ರೋಗ ದೂರ : ಸಂಶೋಧಕ ಡಾ. ಅವಿನಾಶ್ ಸಾಲ್ಗಾರ್ ಸಲಹೆ

ಕಡಬ: ನಮ್ಮ ಹಿರಿಯರು ಮನೆಯಲ್ಲಿರುವ ವಸ್ತುಗಳು, ದೇಸಿ ಗೋವಿನ ಹಾಲು ಇತ್ಯಾದಿಗಳನ್ನೇ ಔಷಧವಾಗಿ ಬಳಸುತ್ತಿದ್ದರು. ವಿದ್ಯಾರ್ಥಿಗಳು ಎಲ್ಲರೂ ದೈಹಿಕವಾಗಿ, ವಾನಸಿಕವಾಗಿ ಸಧೃಢರಾಗಿದ್ದು, ಆರೋಗ್ಯವಂತ ಸವಾಜವನ್ನು ಕಟ್ಟಲು ಸಹಕರಿಸಬೇಕಿದೆ ಎಂದು ಬೆಂಗಳೂರಿನ ವೈದ್ಯ, ಸಂಶೋಧಕ ಡಾ. ಅವಿನಾಶ್ ಸಾಲ್ಗಾರ್ ಹೇಳಿದರು.

ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾದ ‘ಮನೆ ಮದ್ದುಗಳು’ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ನಮ್ಮ ಜೀವನ ಪದ್ಧತಿಯನ್ನು ಸ್ವಲ್ಪ ಬದಲಾವಣೆ ವಾಡಿದರೆ, ಅನೇಕ ರೋಗಗಳನ್ನು ತಡೆಗಟ್ಟಬಹುದು. ಮನೆಯಲ್ಲಿಯೇ ಇರುವ ಅನೇಕ ವಸ್ತುಗಳೇ ನಮಗೆ ಔಷಧವಾಗಿ ಸಹಕಾರಿಯಾಗುತ್ತವೆ ಎಂದರು.

ಗೋಸೇವಾ ಪ್ರಮುಖ್ ಗಂಗಾಧರ್, ಬಿ.ಎಸ್.ಎನ್.ಎಲ್. ಸಂಸ್ಥೆಯ ನಿವೃತ್ತ ಉದ್ಯೋಗಿ ದಿವಾಕರ್, ಪ್ರಾಂಶುಪಾಲ ಚಂದ್ರಶೇಖರ್ ಕೆ. ಉಪಸ್ಥಿತರಿದ್ದರು. ಉಪನ್ಯಾಸಕ ಚೇತನ್ ಎಂ. ಸ್ವಾಗತಿಸಿ, ವಂದಿಸಿದರು. ಹಿರಿಯ ಉಪನ್ಯಾಸಕಿ ಜಯಶ್ರೀ ನಿರೂಪಿಸಿದರು.