ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಹಿಳಾ ಮಂಟಪವು ಮಹಿಳೆ ಮತ್ತು ಸಮಾಜ ಸೇವೆ ಉಪನ್ಯಾಸ ಮತ್ತು ವಚನ ಗಾಯನ ಕಾರ್ಯಕ್ರಮವನ್ನು ಡಿ. 17ರಂದು ಸಂಜೆ 6 ಗಂಟೆಗೆ ರಾ.ಹ. ದೇಶಪಾಂಡೆ ಭವನದಲ್ಲಿ ಆಯೋಜಿಸಿದೆ.
ಧಾರವಾಡ ಲಯನ್ಸ್ ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಶೈಲಾ ಕರಗುದರಿ ಅವರು ಮಹಿಳೆ-ಲಯನ್ಸ್ ಕ್ಲಬ್-ಸಮಾಜ ಸೇವೆ ಕುರಿತು ಹಾಗೂ ರಾಪಿಡ್ ಸಂಸ್ಥೆ ಸಿಇಒ ಮಾಳವಿಕಾ ಕಡಕೋಳ ಅವರು ಮಹಿಳೆ-ಎನ್ಜಿಒ-ಸಮಾಜ ಸೇವೆ ಕುರಿತು ಉಪನ್ಯಾಸ ನೀಡುವರು. ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ನಂತರ ವಿವಿಧ ಭಜನಾ ಮಂಡಳ ಸದಸ್ಯರು ವಚನ ಗಾಯನ ಪ್ರಸ್ತುಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.