ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರೊ. ಎಂ.ಕೆ. ಸೇತುರಾವ ಸ್ಮಾರಕ ಉಪನ್ಯಾಸ ಮಾಲಿಕೆ ನಿಮಿತ್ತ ಮೊದಲ ಉಪನ್ಯಾಸವನ್ನು ಜೂ. 10ರಂದು ಇಲ್ಲಿನ ಕೃಷಿ ವಿಶ್ವ ವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ ಮತ್ತು ಕೃಷಿ ವಿಸ್ತರಣೆ ಮತ್ತು ಸಂವಹನ ನಿರ್ವಹಣೆ ವಿಭಾಗಗಳಿಂದ ಕೃವಿವಿ ಸಭಾಭವನದಲ್ಲಿ ಆಯೋಜಿಸಲಾಗಿದೆ.
ಮಾಜಿ ಪ್ರಾಧ್ಯಾಪಕ ಡಾ. ಎಸ್.ವಿ. ರೆಡ್ಡಿ ಭಾಗವಹಿಸಿ ಜಾಗತಿಕ ಮಟ್ಟದಲ್ಲಿ ಬದಲಾವಣೆಯಾದ ಕೃಷಿ ವಿಸ್ತರಣಾ ವ್ಯವಸ್ಥೆ: ಸವಾಲುಗಳು ಮತ್ತು ಮುಂದಿನ ಕಾರ್ಯವೈಖರಿ ಕುರಿತು ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಮಾಜಿ ಕೃಷಿ ವಿಸ್ತರಣಾ ನಿರ್ದೇಶಕ ಡಾ. ವಿ. ವೀರಭದ್ರಯ್ಯ, ಶಶಿಕಲಾ. ಎಂ. ಎಸ್. ಭಾಗವಹಿಸುವರು. ಕೃವಿವಿ ಉಪಕುಲಪತಿ ಡಾ.ಪಿ.ಎಲ್.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ವಿಸ್ತರಣಾ ಶಿಕ್ಷಣ ವಿಭಾಗ, ವಿಸ್ತರಣೆ ಮತ್ತು ಸಂವಹನ ನಿರ್ವಹಣೆ ವಿಭಾಗ, ಶಿಕ್ಷಕರು, ಅಧಿಕಾರಿಗಳು, ಆಡಳಿತಾಧಿಕಾರಿಗಳು, ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.