ದೇವರ ತಿಮ್ಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಲೇಖನ ಸಾಮಗ್ರಿ ವಿತರಿಸಲಾಯಿತು. ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ನಾಗರಾಜ, ಸಮನ್ವಯಾಧಿಕಾರಿ ಹೊನ್ನತ್ತೆಪ್ಪ, ಎಸ್ಡಿಎಂಸಿ ಅಧ್ಯಕ್ಷ ಅಣ್ಣೇಶ್, ಮುಖ್ಯಶಿಕ್ಷಕಿ ಲತಾ ಟಿ.ಎಚ್.ಎಂ, ಸವಿತಾ ಐ.ಜಿ., ಶೋಭಾ ಹುಲ್ಮನಿ, ಮಲ್ಲಿಕಾರ್ಜುನ್, ಸಾಜೀದಾ ಬಾನು ಇತರರಿದ್ದರು. 
ಜಿಲ್ಲೆ

ಮೊಬೈಲ್ ಬಿಟ್ಟು ಓದಿನತ್ತ ಗಮನಹರಿಸಿ

ನರೇಶ್ ಕುಮಾರ್

ಹರಪನಹಳ್ಳಿ: ಉತ್ತಮ ಶಿಕ್ಷಣ ಪಡೆದು ಪಾಲಕರ ಕನಸು ನನಸು ಮಾಡಬೇಕು ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ದೇವರ ತಿಮ್ಮಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ‘ಇಷ್ಟನ್ನಾದರೂ ಕಲಿಯಲೇ ಬೇಕು’ ಎಂಬ ವಿನೂತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಹರಿಸಬೇಕು. ಮೊಬೈಲ್, ಟಿವಿಯಿಂದ ದೂರವಿರಬೇಕು. ಶಿಕ್ಷಕರು ಪ್ರೀತಿಯಿಂದ ಗುಣಮಟ್ಟದ ಶಿಕ್ಷಣ ಕಲಿಸಬೇಕು ಎಂದು ಸಲಹೆ ನೀಡಿದರು.

ಬಿಇಒ ಲೇಪಾಕ್ಷಪ್ಪ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಬಗ್ಗೆ ಶಿಕ್ಷಕರು ವಿಶೇಷ ಗಮನಹರಿಸಬೇಕು. ಅವರ ಕಲಿಕಾ ಸಾಮರ್ಥ ಅರಿತು ಪಾಠ ಮಾಡಬೇಕು. ಮಕ್ಕಳೊಂದಿಗೆ ಪ್ರೀತಿ, ವಿಶ್ವಾಸದಿಂದ ಇರಬೇಕು ಎಂದರು. ಸಿಆರ್‌ಪಿ ಸಲೀಂ, ಸಾಜೀದಾ ಬಾನು, ರೇಣುಕಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ಉದ್ದಾರ ಗಣೇಶ್, ಇರ್ಫಾನ್, ಲಾಟಿ ದಾದಾಪೀರ್ ಇತರರಿದ್ದರು.