ಜಿಲ್ಲೆ

ಎಸ್‌ಡಿಎಂಸಿಗೆ ರಜೆ ಅಧಿಕಾರ

Shivamogga - Desk - Praveena Kumar S

ಶಿವಮೊಗ್ಗ: ಮಳೆಯಿಂದಾಗಿ ಹೊಸನಗರ, ತೀರ್ಥಹಳ್ಳಿ ಮತ್ತು ಸಾಗರ ತಾಲೂಕಿನ ಸರ್ಕಾರಿ ಶಾಲೆಗಳಿಗೆ ರಜೆ ನೀಡುವ ಅಧಿಕಾರವನ್ನು ಎಸ್‌ಡಿಎಂಸಿಯವರಿಗೆ ವಹಿಸಿ ಡಿಡಿಪಿಐ ಸಿ.ಆರ್.ಪರಮೇಶ್ವರಪ್ಪ ಆದೇಶಿಸಿದ್ದಾರೆ. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಎಸ್‌ಡಿಎಂಸಿಯವರು ಮಳೆಯ ತೀವ್ರತೆಯನ್ನು ಪರಿಗಣಿಸಿ ಆಯಾ ಬಿಇಒಗಳ ಜತೆ ಚರ್ಚಿಸಿ ಶಾಲೆಗಳಿಗೆ ರಜೆ ನೀಡಬಹುದಾಗಿದೆ. ಈ ರಜೆಯನ್ನು ಮುಂದೆ ರಜಾದಿನಗಳಂದು ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ.