ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಧ್ವಜಾರೋಹಣ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ವಿನೋದ ಹತ್ತಳ್ಳಿ ಮಾತನಾಡಿದರು. ತಾಪಂ ಇಒ ಸಂಜೀವ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ, ಬಿಇಒ ಸಮೀರ ಮುಲ್ಲಾ, ಅಪ್ಪಾಸಾಹೇಬ ನಿಂಬಾಳಕರ ಇದ್ದರು. 
ಜಿಲ್ಲೆ

ದೇಶದ ಅಭಿವೃದ್ಧಿಗಾಗಿ ಭೇದಭಾವ ತೊರೆಯಿರಿ

ದತ್ತಾತ್ರೇಯ ಪಿ ಕುಲಕರ್ಣಿ

ಮುಧೋಳ: ನ್ಯಾಯ, ನಿಷ್ಠೆ, ಪ್ರಾಮಾಣಿಕ ದೇಶಭಕ್ತರ ಸ್ವಚ್ಛ, ಸುಂದರ, ಸದೃಢ ಭಾರತ ನಮ್ಮದಾಗಬೇಕು ಎಂದು ತಹಸೀಲ್ದಾರ್ ವಿನೋದ ಹತ್ತಳ್ಳಿ ಹೇಳಿದರು.

ನಗರದ ಕವಿಚಕ್ರವರ್ತಿ ರನ್ನ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯೋವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಈ ದೇಶದ ಬಗ್ಗೆ ಅಪಾರ ಕನಸು ಕಂಡ ಹಿರಿಯರ ಆಸೆ ನನಸಾಗಿಸಲು ಜಾತಿ-ಮತ-ಪಂಥಗಳೆಂಬ ಭೇದಭಾವ ತೊರೆದು ಒಂದಾಗಿ ಶ್ರಮಿಸಬೇಕಾಗಿದೆ.

ನಗರಸಭೆ ಸದಸ್ಯರಾದ ಡಾ. ಸತೀಶ ಮಲಘಾಣ, ಗುರುಪಾದ ಕುಳಲಿ, ಸಿಪಿಐ ಮಹದೇವ ಶಿರಹಟ್ಟಿ, ತಾಪಂ ಇಒ ಸಂಜೀವ ಹಿಪ್ಪರಗಿ, ನಗರಸಭೆ ಪೌರಾಯುಕ್ತ ಶಿವಪ್ಪ ಅಂಬಿಗೇರ, ಬಿಇಒ ಸಮೀರ ಮುಲ್ಲಾ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಮೇಶ ನಿಡೋಣಿ, ಕಸಾಪ ಮಾಜಿ ಅಧ್ಯಕ್ಷ ಸಂಗಮೇಶ ನೀಲಗುಂದ, ವಿದ್ಯಾ ಬಿರಾದಾರ, ಬಿ.ಆರ್. ಕೋರೆಗೋಳ, ಪಿಎಸ್‌ಐ ಅಜೀತರಡ್ಡಿ ಹೊಸಮನಿ, ಶ್ರೀಶೈಲ ಪಸಾರ, ಗೋವಿಂದ ರಾಠೋಡ, ಬಿಆರ್‌ಸಿಒ ಅಡಿವೆಪ್ಪ ಛಬ್ಬಿ, ಬಸವರಾಜ ನೀಲನಾಯಕ, ವಿಠ್ಠಲ ಮಾದರ, ಮಹೇಶ ದಂಡನ್ನವರ ಇತರರಿದ್ದರು.

ಇದಕ್ಕೂ ಮುಂಚೆ ಪೊಲೀಸ್, ಎನ್‌ಸಿಸಿ, ಮಾಜಿ ಸೈನಿಕರು ಹಾಗೂ ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು.
ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಭಾಷಣ, ಸಾಮೂಹಿಕ ನೃತ್ಯ, ಸಾಮೂಹಿಕ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಸ್ಪರ್ಧೆಗಳು ನಡೆದವು.