ವಿಜಯಪುರ ಹೊರವಲಯದ ಇಟ್ಟಂಗಿಹಾಳದಲ್ಲಿರುವ ವೇದ ಅಕಾಡೆಮಿಯಲ್ಲಿ ಗಣಿತ ಪ್ರಯೋಗಾಲಯಕ್ಕೆ ಚಾಲನೆ ನೀಡಲಾಯಿತು. ಸಂಸ್ಥೆ ಖಜಾಂಚಿ ಶಿವಲೀಲಾ ಎಸ್​ ಕೆಲೂರ, ಪ್ರಾಚಾರ್ಯ ಸುನೀಲ್​ ಬಿ.ಎಂ., ಗಣಿತ ವಿಭಾಗ ಮುಖ್ಯಸ್ಥರಾದ ಶಿವಶಂಕರ, ಸಪ್ನಾ ಪಾಟೀಲ ಇತರರಿದ್ದರು. 
ಜಿಲ್ಲೆ

ಗಣಿತ ಕಲಿಕೆ ಅತ್ಯವಶ್ಯ

ಗಿರೀಶ ಸಗರ

ವಿಜಯಪುರ: ವಿದ್ಯಾರ್ಥಿಗಳು ಭಾಷೆ ವಿಷಯದ ಜೊತೆಗೆ ಗಣಿತದ ಕಲಿಕೆಯೂ ಆಸಕ್ತಿ ವಹಿಸಬೇಕು. ಬಾಳೆ ಹಣ್ಣಿನ ಸವಿ ತಿಳಿಯಬೇಕಾದರೆ ಅದನ್ನು ಬಿಡಿಸಿ ತಿನ್ನಬೇಕು. ಹಾಗೆಯೇ ಗಣಿತವನ್ನು ಅರ್ಥಮಾಡಿಕೊಂಡು ಬಿಡಿಸಿದರೆ ಅದು ಬಾಳೆಹಣ್ಣನ್ನು ತಿಂದಷ್ಟೇ ಸುಲಭ ಎಂದು ಹೇಳಿದರು.

ನಗರದ ಹೊರವಲಯದ ಇಟ್ಟಂಗಿಹಾಳದಲ್ಲಿರುವ ಶ್ರೀ ಸಂಸ್ಥೆಯ ವೇದ ಅಕಾಡೆಮಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ "ರಾಷ್ಟ್ರೀಯ ಗಣಿತ ದಿನಾಚರಣೆ' ಕಾರ್ಯಕ್ರಮಚಲ್ಲಿ ಅವರು ಮಾತನಾಡಿ, ವೇದ ಅಕಾಡೆಮಿಯಲ್ಲಿ ಗಣಿತ ಕಲಿಕೆಗೆ ಪೂರಕವಾದ ಗಣಿತ ಪ್ರಯೋಗಾಲವನ್ನು ಆರಂಭಿಸಲಾಗಿದ್ದು, ಗಣಿತ ಉಪಕರಣಗಳ ಸಹಾಯದಿಂದ ವಿದ್ಯಾರ್ಥಿಗಳು ಸುಲಭವಾಗಿ ಕ್ಲಿಷ್ಟ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಸಂಸ್ಥೆ ಖಜಾಂಚಿ ಶಿವಲೀಲಾ ಎಸ್​ ಕೆಲೂರ ರಾಷ್ಟ್ರೀಯ ಗಣಿತ ದಿನಾಚರಣೆ ಉದ್ಘಾಟಿಸಿ, ಕಬ್ಬಿಣದ ಕಡಲೆ ಎಂದು ಭಾವಿಸುವ ಗಣಿತದ ಸುಲಭ ಕಲಿಕೆಗಾಗಿ ವೇದ ಅಕಾಡೆಮಿಯಲ್ಲಿ ಗಣಿತ ಪ್ರಯೋಗಾಲಯ ಆರಂಭಿಸಿದ್ದು ಅದರ ಮೂಲಕ ಗಣಿತವನ್ನು ಮಕ್ಕಳಿಗೆ ಸುಲಭವಾಗಿ ಕಲಿಸಲಾಗುವುದು ಎಂದರು.

ಪ್ರಾಚಾರ್ಯ ಸುನೀಲ್​ ಬಿ.ಎಂ. ಗಣಿತ ಮಕ್ಕಳಿಗೆ ಕರಗತವಾಗಲು ಪ್ರಯೋಗಾಲಯದ ಅವಶ್ಯಕತೆ ಸಾಕಷ್ಟಿತ್ತು. ಈಗ ಪ್ರಯೋಗಾಲಯ ಆರಂಭಗೊಂಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಪ್ರೌಢ ಶಾಲಾ ವಿಭಾಗದ ಗಣಿತ ವಿಷಯದ ಮುಖ್ಯಸ್ಥ ಶಿವಶಂಕರ ಮಾತನಾಡಿ, ನಿತ್ಯ ಕಪು$್ಪ ಹಲಗೆ ಮೇಲೆ ಲೆಕ್ಕಗಳನ್ನು ಬಿಡಿಸುವುದು ಸಹಜ. ಅದರೊಂದಿಗೆ ಪ್ರಯೋಗ ಸಲಕರಣೆಯೊಂದಿಗೆ ಗಣಿತ ಕಲಿತರೆ ಅದು ಸರಳವಾಗಿ ಅರ್ಥವಾಗುವುದಲ್ಲದೇ, ಅಧಿಕ ಅಂಕ ಗಳಿಕೆಗೂ ಕಾರಣವಾಗುತ್ತದೆ ಎಂದರು.

ಪ್ರಾಥಮಿಕ ಶಾಲಾ ವಿಭಾಗದ ಗಣಿತ ವಿಷಯದ ಮುಖ್ಯಸ್ಥೆ ಸಪ್ನಾ ಪಾಟೀಲ ಮಾತನಾಡಿ, ಗಣಿತ ವಿಷಯವನ್ನು ಪ್ರಯೋಗಾಲಯದ ಮುಖಾಂತರ ಕಲಿಯುದರಿಂದ ಮಕ್ಕಳ ಕಲಿಕೆ ಬಹು ಮಟ್ಟಕ್ಕೆರಲು ಎರಡು ಮಾತಿಲ್ಲ ಎಂದರು.

ಹತ್ತನೇ ತರಗತಿ ವಿದ್ಯಾರ್ಥಿನಿ ಸ್ಫೂರ್ವಿ ಹಳ್ಳಿ ಮಾತನಾಡಿ, ಗಣಿತ ಪ್ರಯೋಗಾಲಯ ಅತ್ಯದ್ಭುತವಾಗಿದೆ. ಈ ಪದ್ಧತಿಯಲ್ಲಿ ಲೆಕ್ಕಗಳನ್ನು ಬಿಡಿಸುವುದು ಸುಲಭವಾಗಿದೆ ಎಂದರೆ, 9ನೇ ತರಗತಿ ವಿದ್ಯಾರ್ಥಿ ಮನಸ್ವಿ ತಳವಾರ, ಗಣಿತದ ಸೂತ್ರಗಳನ್ನು ನೆನಪಿನಲ್ಲಿಡುವುದು ಕಷ್ಟವಾಗಿತ್ತು. ಗಣಿತ ಪ್ರಯೋಗಾಲಯದ ಸಹಾಯದಿಂದ ಸೂತ್ರಗಳನ್ನು ಸುಲಭವಾಗಿ ನೆನಪಿನಲ್ಲಿಡಬಹುದಾಗಿದೆ, ಜೊತೆಗೆ ಗಣಿತ ಕಲಿಕೆಗೆ ಆಸಕ್ತಿ ಮೂಡಿದೆ ಎಂದು ಹೇಳಿದರು.

ಗಣಿತ ಪ್ರಯೋಗಾಲಯದ ಸಂಯೋಜಕ ರವಿಪ್ರಸಾದ, ಮುಖ್ಯ ಶಿಕಿ ರಶ್ಮಿ ಕವಟಗಿಮಠ, ಶಿವಶಂಕರ ಮೇಲಿನಮನಿ, ರಾವೇಂದ್ರ ಕುಲಕರ್ಣಿ, ಮಧು ಕಲಮಠ, ಗುರುದೇವಿ ಮಿರ್ಜಿ, ಸುಧಾ ಚಿರಲದಿನ್ನಿ, ಸಪ್ನಾ, ಅರ್ಪಿತಾ ಮಮದಾಪುರ, ಶೃತಿ ಗದ್ಯಾಳ, ಶಾಲಾ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.