ಗೋಣಿಕೊಪ್ಪ: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಕರಾಟೆಯನ್ನು ಸರ್ಕಾರ ಕಡ್ಡಾಯಗೊಳಿಸಿದೆ. ಸರ್ವ ಶಿಕ್ಷಣ ಆಭಿಯಾನದಡಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಹೆಣ್ಣು ಮಕ್ಕಳಿಗೆ ಕರಾಟೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಿದೆ ಎಂದು ದಕ್ಷಿಣ ಭಾರತದ ಕರಾಟೆ ಅಸೋಸಿಯೇಷನ್ ಅಧ್ಯಕ್ಷರೂ ಆದ ಮಾಜಿ ಎಂಎಲ್ಸಿ ಸಿ.ಎಸ್.ಅರುಣ್ ಮಾಚಯ್ಯ ತಿಳಿಸಿದರು.
ಕೊಡಗು ಜಿಲ್ಲಾ ಕರಾಟೆ ಅಸೋಸಿಯೇಷನ್, ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ಗೋಣಿಕೊಪ್ಪಲುವಿನ ಕಾವೇರಿ ಕಾಲೇಜು ಒಳಾಂಗಣ ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಬಾಲಕ-ಬಾಲಕಿಯರ ಕರಾಟೆ ಪಂದ್ಯಾವಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಎಲ್ಲ ಶಾಲೆ, ವಸತಿ ಶಾಲೆಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ, ಕರಾಟೆ ಪರಿಚಯಿಸಿದ ಕೀರ್ತಿ ಕರಾಟೆ ಅಸೋಸಿಯೇಷನ್‌ಗೆ ಸಲ್ಲುತ್ತದೆ. ಅನೇಕ ಪೈಪೋಟಿಗಳನ್ನು ಎದುರಿಸಿ ಇಂದು ಸಂಸ್ಥೆಯು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಸತತವಾಗಿ ಕರಾಟೆಯನ್ನು ಅಭ್ಯಸಿಸುವ ಪಟುಗಳು ನಂತರದಲ್ಲಿ ಉತ್ತಮ ಕರಾಟೆ ಪಟುಗಳಾಗಿ ಹೊರಹೊಮ್ಮುವ ಮೂಲಕ ತೀರ್ಪುಗಾರರಾಗಿ ಕೆಲಸ ನಿರ್ವಹಿಸುತ್ತಾರೆ. ಇಂತಹ ಕ್ರೀಡಾಪಟುಗಳನ್ನು ಸಮಾಜವು ಗುರುತಿಸುತ್ತಿದೆ. ಆ ಮೂಲಕ ಗೌರವವನ್ನು ನೀಡುತ್ತಿದೆ. ಎಸ್‌ಟಿಎ್ಐ ಭಾರತ ಸರ್ಕಾರದ ಯೋಜನ ಮತ್ತು ಕ್ರೀಡಾ ಇಲಾಖೆಯ ಅೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿದೆ ಎಂದರು.
ದೇಶದ ಎಲ್ಲ ರಾಜ್ಯದಲ್ಲಿ ೆಡರೇಷನ್ ವತಿಯಿಂದ ಪ್ರತಿ ಶಾಲೆಯಲ್ಲಿ ಕರಾಟೆ ಶಿಕ್ಷಣ ಕಡ್ಡಾಯಗೊಳಿಸಿದೆ. ಉತ್ತಮ ಗುಣಮಟ್ಟದ ಅನುಭವಿ ಕರಾಟೆ ತೀರ್ಪುಗಾರರು, ಡಬ್ಲುಕೆಎ್, ಎಕೆಎ್, ಕಿಯೋ ತೀರ್ಪುಗಾರರು ಆಸೋಸಿಯೇಷನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಿ ಕರಾಟೆ ಕ್ರೀಡೆಗೆ ಆಗಮಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಕಾರದಿಂದ ಜಿಲ್ಲಾ ಮಟ್ಟದಿಂದ ಕರಾಟೆ ಪಂದ್ಯಾವಳಿಯನ್ನು 3 ವಿಭಾಗದಲ್ಲಿ ಆಯೋಜನೆ ಮಾಡಲಾಗಿದೆ. ಇಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು ರಾಜ್ಯ ಮಟ್ಟವನ್ನು ಪ್ರವೇಶ ಮಾಡುತ್ತಾರೆ. ಇದರ ಜವಾಬ್ದಾರಿಯನ್ನು ಇಲಾಖೆಯು ನಮ್ಮ ಅಸೋಸಿಯೇಷನ್‌ಗೆ ವಹಿಸಿದೆ. ಇದನ್ನು ಅಸೋಸಿಯೇಷನ್ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತ ಬರುತ್ತಿದೆ. ರಾಜ್ಯ ಮಟ್ಟದಲ್ಲಿ ನಡೆಯುವ ಪಂದ್ಯಾಟವನ್ನೂ ಕರಾಟೆ ಅಸೋಸಿಯೇಷನ್ ನಡೆಸುತ್ತಿದೆ ಎಂದರು.
ಗೋಣಿಕೊಪ್ಪ ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಇಟ್ಟಿರ ಕೆ.ಬಿದ್ದಪ್ಪ ಮಾತನಾಡಿ, ಕರಾಟೆ ಕ್ರೀಡೆಯಿಂದ ಹಲವು ಪ್ರಯೋಜನಗಳನ್ನು ತಿಳಿದಿದ್ದೇನೆ. ದೇಹದಾರ್ಢ್ಯತೆಯನ್ನು ಹೆಚ್ಚು ಮಾಡಲು ಕರಾಟೆ ಉತ್ತಮವಾಗಿದೆ. ಮಾನಸಿಕವಾಗಿ ಈ ಕ್ರೀಡೆಯು ಅನುಕೂಲ ಕಲ್ಪಿಸುತ್ತಿದೆ. ದೇಶದಲ್ಲಿ ಉತ್ತಮ ನಾಗರಿಕನಾಗಲು ಕರಾಟೆ ಅಗತ್ಯವಾಗಿದೆ. ಕರಾಟೆ ಪಟುವಿನಿಂದ ಯಾರಿಗೂ ತೊಂದರೆ ಇಲ್ಲ. ತನ್ನ ರಕ್ಷಣೆಗಾಗಿ ಇಂತಹ ಕ್ರೀಡೆಯನ್ನು ಕರಗತ ಮಾಡಿಕೊಳ್ಳುವುದು ಉತ್ತಮ ಎಂದರು.
ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕಾವೇರಪ್ಪ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಾಲೂಕು ಅಕಾರಿ ಕವಿತಾ ತಮ್ಮಯ್ಯ, ಕರಾಟೆ ಅಸೋಸಿಯೇಷನ್‌ನ ಹಿರಿಯರಾದ ಪಟ್ರಪಂಡ ರಘು ನಾಣಯ್ಯ, ತೀರ್ಪುಗಾರರಾದ ಭಾನುಕಾವೇರಪ್ಪ, ಅರುಣ್ ಶನಿವಾರಸಂತೆ, ಮುಕೇಶ್, ಶಿವಣ್ಣ, ಜಮ್ಮಡ ಜಯ ಜೋಯಪ್ಪ, ಮೂಡಗದ್ದೆ ಆರ್.ಸುಮನ್, ಕೆ.ಪಿ.ಸೋಮಣ್ಣ, ಮೈಸೂರಿನ ಮೋಹನ್ ಹಾಗೂ ತಂಡ, ಐ.ಕೆ.ಇಕ್ಬಾಲ್, ಶಿವಪ್ಪ, ಅನಿಲ್‌ಕುಮಾರ್, ಆಂತೋಣಿ, ಕಾರ್ತಿಕ್ ದೇವಯ್ಯ, ಲಯನ್ಸ್ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ನಾಗೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಜಿಲ್ಲೆಯ ವಿವಿಧ ಭಾಗದಿಂದ 500ಕ್ಕೂ ಅಕ ವಿದ್ಯಾರ್ಥಿಗಳು ಆಗಮಿಸಿದ್ದರು. ಮುಂಜಾನೆಯಿಂದ ಸಂಜೆಯವರೆಗೂ ಕರಾಟೆ ಪಂದ್ಯಾವಳಿಯು ಮೂರು ಹಂತದಲ್ಲಿ ಜರುಗಿತು. ವಿದ್ಯಾರ್ಥಿಗಳ ಪಾಲಕರು ಸೇರಿದಂತೆ ಶಾಲೆಯ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.