ಮುಧೋಳ: ಮೂರರಿಂದ ಆರು ವರ್ಷದ ಪುಟಾಣಿ ಮಕ್ಕಳ ಕಲಿಕೆಗೆ ಸುಗಮವಾಗುವ ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ಕ್ರೀಡೋ ಲ್ಯಾಬ್‌ನ್ನು ಅರಳಿಕಟ್ಟಿ ೌಂಡೇಶನ್‌ನ ಮುಧೋಳ ರಾಯಲ್ ಸ್ಕೂಲ್‌ನಲ್ಲಿ ಅಳವಡಿಸಲಾಗಿದೆ. ಕ್ರೀಡೋ ಲ್ಯಾಬ್‌ನಿಂದ ಮಕ್ಕಳ ಕಲಿಕಾ ಸಾಮರ್ಥ ಹಾಗೂ ಕಲಿಯುವ ಹುಮ್ಮಸ್ಸು ದ್ವಿಗುಣಗೊಳ್ಳುತ್ತದೆ ಎಂದು ಕೊಣ್ಣೂರು ಸಮೂಹ ಶಿಕ್ಷಣ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೊಣ್ಣೂರ ಹೇಳಿದರು.
ಮಂಗಳವಾರ ಅರಳಿಕಟ್ಟಿ ೌಂಡೇಶನ್ ಸಂಸ್ಥೆ ಮುಧೋಳ ರಾಯಲ್ ಸ್ಕೂಲ್‌ನಲ್ಲಿ ಕ್ರೀಡೋ ಲ್ಯಾಬ್ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿ, ಸುಸಜ್ಜಿತವಾದ ಕ್ರೀಡೋ ಲ್ಯಾಬ್ ಕಲಿಕೆಯ ವಿಷಯವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ಮುಟ್ಟಿಸಲು ಈ ಕಲಿಕಾ ಸಾಧನಗಳು ಸಹಾಯ ಮಾಡಲಿವೆ. ಸಾಮಾಜಿಕ ಚಟುವಟಿಕೆ ಮೂಲಕ ಜನಮನ ಸೆಳೆಯುವ ಡಾ. ತಿಮ್ಮಣ್ಣ ಅರಳಿಕಟ್ಟಿಯವರು ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಮುಧೋಳ ರಾಯಲ್ ಸ್ಕೂಲ್ ಅಧ್ಯಕ್ಷೆ ಸವಿತಾ ಅರಳಿಕಟ್ಟಿ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು, ವಿನೂತನ ಮಾದರಿಯ ಕ್ರೀಡಾ ಲ್ಯಾಬ್, ಮಕ್ಕಳ ಮಾನಸಿಕ ಚಟುವಟಿಕೆಗಳ ಮೂಲಕ ಮಕ್ಕಳಿಗೆ ವಿನೂತನ ಜ್ಞಾನ ನೀಡಲಾಗುತ್ತದೆ ಎಂದು ಹೇಳಿದರು.
ಅರಳಿಕಟ್ಟಿ ೌಂಡೇಶನ್ ಅಧ್ಯಕ್ಷ ಡಾ. ತಿಮ್ಮಣ್ಣ ಅರಳಿಕಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನರ್ಸರಿ, ಪುಟಾಣಿ ಮಕ್ಕಳ ದೈಹಿಕ ಚಟುವಟಿಕೆಗಳ ಜೊತೆಗೆ ಮಾನಸಿಕ ಚಟುವಟಿಕೆಗಳ ಮೂಲಕ ಶಿಕ್ಷಣ ಕಲಿಯಲು ಕ್ರೀಡೋ ಲ್ಯಾಬ್ ಹೆಚ್ಚು ಸಹಕಾರಿಯಾಗಲಿದೆ ಎಂದರು.
ರಾಯಲ್ ಸ್ಕೂಲ್ ಕಾರ್ಯದರ್ಶಿ ವಿನಾಯಕ ತಿಮ್ಮಣ್ಣ ಅರಳಿಕಟ್ಟಿ, ಪಿಎಸ್‌ಐ ಅಜೀತ ಕುಮಾರ ಹೊಸಮನಿ, ಆಡಳಿತಾಧಿಕಾರಿ ಇಂದಿರಾ ಸಾತನೂರ, ಪ್ರಾಂಶುಪಾಲ ಚಂದ್ರಶೇಖರ, ನಾಗವಂದ ವೇದಿಕೆ ಮೇಲೆ ಉಪಸ್ಥಿತರಿದ್ದರು.