ಕಾನಹೊಸಹಳ್ಳಿ ಕೊಲುಮೆಹಟ್ಟಿ ಸಹಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ಗಣಿತ ಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಜನ್ಮ ದಿನಾಚರಣೆ ನಿಮಿತ್ತ ರಾಷ್ಟ್ರೀಯ ಗಣಿತ ದಿನವನ್ನು ಆಚರಿಸಲಾಯಿತು. ಬಿಇಒ ಪದ್ಮನಾಭ ಕರಣಂ, ಎಸ್ಡಿಎಂಸಿ ಉಪಾಧ್ಯಕ್ಷೆ ಮಹಾಲಕ್ಷ್ಮೀ, ಗ್ರಾಪಂ ಸದಸ್ಯರಾದ ಎಂ.ನೇತ್ರಾವತಿ ಮಂಜುನಾಥ, ಮಂಜಮ್ಮ, ಬಿಆರ್‌ಪಿ ನಾಗರಾಜ, ಇಸಿಒ ನಾಗರಾಜ ಇತರರಿದ್ದರು. 
ಜಿಲ್ಲೆ

ಶಿಕ್ಷಕರ ಮಾರ್ಗದರ್ಶನದಲ್ಲಿ ಗಣಿತ ಕಲಿಯಿರಿ

ಕಾನಹೊಸಹಳ್ಳಿ: ಬಡತನದಲ್ಲಿ ಹುಟ್ಟಿ ಬೆಳೆದ ಶ್ರೀನಿವಾಸ ರಾಮಾನುಜನ್ ಅಯ್ಯಂಗಾರ್ ಅವರು ಕಠಿಣ ಪರಿಶ್ರಮದಿಂದ ಉನ್ನತಿ ಸಾಧಿಸುವ ಮೂಲಕ ಜಗತ್ತಿನಲ್ಲೇ ಶ್ರೇಷ್ಠ ಗಣಿತ ಶಾಸ್ತ್ರತಜ್ಞರೆಂಬ ಖ್ಯಾತಿಗಳಿಸಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಕರಣಂ ತಿಳಿಸಿದರು.

ಸಮೀಪದ ಕೊಲುಮೆಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಗಣಿತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1987ರ ಡಿ. 22ರಂದು ಜನಿಸಿದ ಇವರು ಗಣಿತ ವಿಷಯ ಕುರಿತು ಸ್ಮರಣ ಶಕ್ತಿ ಅಗಾಧವಾಗಿದ್ದು, ಜಗತ್ತಿನಲ್ಲಿ ಗಣಿತದ ಬಗ್ಗೆ ಇರುವ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಂಥ ಸಾಮರ್ಥ್ಯ ಉಳ್ಳವರಾಗಿದ್ದರು. ಅವರ ಸಾಧನೆಯನ್ನು ಜಗತ್ತು ಕೊಂಡಾಡಿದೆ. ವಿದ್ಯಾರ್ಥಿಗಳು ಗಣಿತ ವಿಷಯವನ್ನು ಕಬ್ಬಿಣದ ಕಡಲೆ ಎಂಬಂತೆ ಭಾವಿಸದೇ ಶಿಕ್ಷಕರ ಮಾರ್ಗದರ್ಶನದಲ್ಲಿ ಸುಲಭಗೊಳಿಸಿಕೊಳ್ಳಬಹುದು ಎಂದು ತಿಳಿಸಿದರು.

ಕೊಲುಮೆಹಟ್ಟಿ ಕ್ಲಸ್ಟರ್ ಸಿಆರ್‌ಪಿ ಬಿ.ಮೌನೇಶ ಆಚಾರ್, ಶಿಕ್ಷಕ ಮಾರೇಗೌಡ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಉಮೇಶ ಅಧ್ಯಕ್ಷತೆ ವಹಿಸಿದ್ದರು.

ಸಿಆರ್‌ಪಿಗಳಾದ ಜಿ.ಟಿ.ಸಿದ್ದೇಶ್ವರ್, ತಿಪ್ಪೇಸ್ವಾಮಿ, ಲೋಕೇಶ, ಮುಖ್ಯಶಿಕ್ಷಕರಾದ ಕೆ.ಜಿಲಾನ್ ಬಾಷಾ, ಬಸಮ್ಮ, ಗುರುರಾಜ ಇತರರಿದ್ದರು.