ನೆಲಮಂಗಲ : ಜೀವನದಲ್ಲಿ ವಿದ್ಯೆಯೇ ದೊಡ್ಡದು. ಅದು ಎಲ್ಲರ ಬಾಳನ್ನು ಸುಂದರ ಮಾಡುತ್ತದೆ. ವಿದ್ಯೆ ಕಲಿತರೆ ಏನು ಬೇಕಾದರೂ ಸಾಧಿಸಬಹುದು ಎಂದು ತಹಸೀಲ್ದಾರ್ ಟಿ.ಎಸ್.ಶೀತಲ್ ತಿಳಿಸಿದರು. ನಗರದ ಶ್ರೀ ಬಸವೇಶ್ವರ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಯ ಬಳಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು. ಶಿಕ್ಷಣವನ್ನು ಅಂಕ ಗಳಿಕೆಗೆ ಸೀಮಿತವಾಗಿಸದೆ ಶಿಸ್ತು, ವಿನಯ, ಸಂಸ್ಕಾರ ಕಲಿತು ಪಾಲಕರ ನಂಬಿಕೆ ಉಳಿಸಿಕೊಳ್ಳಬೇಕು. ಪುಸ್ತಕ ಒದುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.
ಸ್ನೇಹ ಸೇವಾ ಟ್ರಸ್ಟ್ನ ಟ್ರಸ್ಟಿ ಡಾ.ಕೆ.ರಾಕೇಶ್ ಮಾತನಾಡಿ, ಆಧುನಿಕ ಸಮಾಜದಲ್ಲಿ ತಂತ್ರಜ್ಞಾನ ಹೆಚ್ಚಾಗುತ್ತಿದ್ದು, ಶೈಕ್ಷಣಿಕ ೇತ್ರದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ವಿದ್ಯಾರ್ಥಿಗಳು ನಿಖರ ಗುರಿ ಹೊಂದದೆ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಶ್ರದ್ಧೆಯಿಂದ ವಿದ್ಯಾಭ್ಯಾಸ ಮಾಡಿದಲ್ಲಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಸಾಧ್ಯ. ವಿದ್ಯೆಯಿಂದ ಗೌರವ ಮತ್ತು ಹಣ ಸಂಪಾದಿಸಬಹುದು ಎಂದರು.
ಪ್ರಥಮ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಜತೆಗೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು. ಪವಾಡ ಶ್ರೀ ಬಸವಣ್ಣ ದೇವರ ಮಠದ ಶ್ರೀ ಸಿದ್ದಲಿಂಗಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಗರಸಭೆ ನಿಟಕಪೂರ್ವ ಅದ್ಯೆ ಪೂರ್ಣಿಮಾಸುಗ್ಗರಾಜು, ವಕೀಲೆ ಕಾವೇರಿ, ದೇವರಾಜು, ಅಕ್ಕಮಹಾದೇವಿ, ಉಪನ್ಯಾಸಕ ಪ್ರದಿಪ್ ಕುಮಾರ್ ಇದ್ದರು.