ಜಿಲ್ಲೆ

ಕಲಿಯಿರಿ, ಕಲಿಸಿರಿ ಯಕ್ಷಗಾನ

ವೀರೇಶ ಸೌದ್ರಿ

ಕುಮಟಾ:ಸಂಸ್ಕಾರ ಕಲಿಸುವ ಕಲೆ ಯಕ್ಷಗಾನ. ಯಕ್ಷಗಾನವನ್ನು ಕಲಿಯಬೇಕು, ಕಲಿಸಬೇಕು ಮತ್ತು ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಪಟ್ಲ ಧ್ರುವ ಫೌಂಡೇಷನ್ ಸಂಸ್ಥಾಪಕ ಭಾಗವತ ಪಟ್ಲ ಸತೀಶ ಶೆಟ್ಟಿ ಹೇಳಿದರು.

ಪಟ್ಟಣದ ರಥಬೀದಿಯಲ್ಲಿ ಇತ್ತೀಚೆಗೆ ಪಾವಂಜೆ ಮೇಳದ ಯಕ್ಷಗಾನ ಪ್ರದರ್ಶನದಲ್ಲಿ ಸನ್ಮಾನಿತರಾಗಿ, ದಿ. ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರು ಮಾತನಾಡಿದರು. ಧಾರೇಶ್ವರರದು ಬಹುಮುಖ ಪ್ರತಿಭೆ. ಉತ್ತಮ ಮಾರ್ಗದರ್ಶಕರಾಗಿದ್ದರು ಎಂದರು.

ಯಕ್ಷಗಾನ-ತಾಳಮದ್ದಳೆ ಕಲಾವಿದ ನಾರಾಯಣ ಭಟ್ ಕೆರೆ, ಪ್ರೊ. ಎಂ.ಜಿ. ಭಟ್ಟ, ಸೈಂಟ್ ಮಿಲಾಗ್ರೀಸ್ ಕೋ ಆಪರೇಟಿವ್ ಬ್ಯಾಂಕ್ ಸಂಸ್ಥಾಪಕ ಜಾರ್ಜ್ ಫರ್ನಾಂಡೀಸ್ ಮಾತನಾಡಿದರು.

ಯಕ್ಷಗಾನ ಸಂಘಟಕ ಪ್ರಕಾಶ ನಾಯ್ಕ, ಪುರಸಭೆ ಸದಸ್ಯೆ ಪಲ್ಲವಿ ಮಡಿವಾಳ, ಯಕ್ಷಗಾನ ಕಲಾವಿದ ಗಣಪತಿ ನಾಯ್ಕ, ಶ್ರೀಪತಿ ನಾವಡ, ಚಿದಾನಂದ ಭಂಡಾರಿ, ಅಶೋಕ ಕಾಮತ, ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿಯ ಲಕ್ಷ್ಮೀದಾಸ ನಾಯಕ, ಅಶೋಕ ಶಾನಭಾಗ, ತ್ರಿವಿಕ್ರಮ ಶಾನಭಾಗ, ವಸುದೇವ ಪ್ರಭು ಇದ್ದರು. ಪ್ರೊ. ಮಂಜುನಾಥ ಭಂಡಾರಿ ನಿರೂಪಿಸಿ, ವಂದಿಸಿದರು. ಬಳಿಕ ‘ಧರ್ಮಸಿಂಹಾಸನ’ ಪೌರಾಣಿಕ ಯಕ್ಷಗಾನ ಪ್ರದರ್ಶನಗೊಂಡಿತು.