ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಣಕಟ್ಟೆ ಹೋಬಳಿ ಕಾಮಸಮುದ್ರ ನಿರಂತರ ಕಲಿಕಾ ಕೇಂದ್ರದಲ್ಲಿ ಹೊಲಿಗೆ ತರಬೇತಿ ಶಿಬಿರವನ್ನು ರವೀಶ್ ಉದ್ಘಾಟಿಸಿದರು. ಉದಯ, ರಾಧಮ್ಮ, ಪದ್ಮಾವತಿ, ಶೀಲಾ, ಶರತ್ ಉಮಾಮಣಿ ಹಾಜರಿದ್ದರು. 
ಜಿಲ್ಲೆ

ಉಪ ಕಸುಬು ಕಲಿತು ಸ್ವಾವಲಂಬಿಗಳಾಗಿ

ಅರಸೀಕೆರೆ (ಗ್ರಾಮಾಂತರ): ಮಹಿಳೆಯರು ಉಪ ಕಸುಬುಗಳನ್ನು ಕಲಿತು ಸ್ವಾವಲಂಬಿ ಜೀವನ ನಡೆಸಬೇಕು. ಈ ಮೂಲಕ ಬದಲಾವಣೆಯತ್ತ ಗಮನ ಹರಿಸಬೇಕು ಎಂದು ಕಾಮಸಮುದ್ರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ರವೀಶ್ ಸಲಹೆ ನೀಡಿದರು.
ತಾಲೂಕಿನ ಕಣಕಟ್ಟೆ ಹೋಬಳಿಯ ಕಾಮಸಮುದ್ರದಲ್ಲಿ ಶುಕ್ರವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರಂತರ ಜ್ಞಾನ ವಿಕಾಸ ಕೇಂದ್ರದಲ್ಲಿ ಆಯೋಜಿಸಿದ್ದ ಹೊಲಿಗೆ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ತಮ್ಮ ಪರಿಸರ ಸ್ವಚ್ಛತೆಗೆ ಮೊದಲು ಆದ್ಯತೆ ನೀಡಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ತಾಲೂಕು ಯೋಜನಾಧಿಕಾರಿ ಉದಯ್ ಮಾತನಾಡಿ, ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು. ಸ್ವಉದ್ಯೋಗಕ್ಕೆ ಹೆಚ್ಚಿನ ಮಹತ್ವ ನೀಡಬೇಕು ಎಂದು ಸಲಹೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯೆ ರಾಧಮ್ಮ ಅಧ್ಯಕ್ಷತೆ ವಹಿಸಿದ್ದರು. ಸಮನ್ವಯಾಧಿಕಾರಿ ಎಂ.ಡಿ.ಪದ್ಮಾವತಿ, ರಮ್ಯಾ, ಸೇವಾಪ್ರತಿನಿಧಿ ಶೀಲಾ, ಶರತ್, ತರಬೇತಿ ಶಿಕ್ಷಕಿ ಉಮಾಮಣಿ ಹಾಗೂ ನಿರಂತರ ಕೇಂದ್ರದ ಸದಸ್ಯರು ಭಾಗವಹಿಸಿದ್ದರು.