ಶ್ರೀ ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಸಾಯಿ ಪ್ರೊಡಕ್ಷನ್ ಇದರ ಆಡಳಿತ ನಿರ್ದೇಶಕ ಸಾಹಿಲ್ ರೈ ಮಾತನಾಡಿದರು. 
ಜಿಲ್ಲೆ

ನಾಯಕತ್ವ ಗುಣ ಜೀವನ ಯಶಸ್ಸಿನ ಕನ್ನಡಿ, ಶ್ರೀ ರಾಮಕೃಷ್ಣ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ನಿರ್ದೇಶಕ ಸಾಹಿಲ್ ರೈ

ಮಂಗಳೂರು: ವಿದ್ಯಾರ್ಥಿಗಳಲ್ಲಿ ಕಾಲೇಜು ಜೀವನ ಸುವರ್ಣ ಜೀವನ. ಈ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಕಠಿಣ ಪರಿಶ್ರಮ ಮತ್ತು ಶ್ರದ್ಧೆ ನಮ್ಮ ಜೀವನ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ. ನಾಯಕತ್ವ ಗುಣ ಸಮಯ ಪಾಲನೆ ಮತ್ತು ಶಿಸ್ತು ಬದ್ಧತೆ ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯ ಎಂದು ಸಾಯಿ ಪ್ರೊಡಕ್ಷನ್ ಇದರ ಆಡಳಿತ ನಿರ್ದೇಶಕ ಸಾಹಿಲ್ ರೈ ಹೇಳಿದರು.

ಶ್ರೀ ರಾಮಕೃಷ್ಣ ಕಾಲೇಜಿನ 2024ರ ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಜೀವನವೆಂಬುದು ಸಾಧನೆಗೆ ಸವಾಲು. ಸಾಧನೆಯಿಂದ ನಾವು ಸಾರ್ಥಕತೆಯನ್ನು ಪಡೆಯಬಹುದು. ಆ ರೀತಿಯ ಸಾಧಕರನ್ನು ಆದರ್ಶವಾಗಿಟ್ಟುಕೊಂಡಾಗ ಯಶಸ್ಸು ನಿಶ್ಚಿತ. ಜೀವನದಲ್ಲಿ ವೃತ್ತಿ ಮತ್ತು ಪ್ರವೃತ್ತಿಗಳ ಬಗ್ಗೆ ಅನುಭವ ಪಡೆದಲ್ಲಿ ಯಶಸ್ಸು ಖಂಡಿತ. ವಿದ್ಯಾರ್ಥಿಗಳಾಗಿದ್ದಾಗ ಪಡೆದ ಅನುಭವಗಳೆ ಮುಂದೆ ನಮಗೆ ಜೀವನದಲ್ಲಿ ಮಾರ್ಗದರ್ಶನವಾಗಿರುತ್ತದೆ ಎಂದರು.

ಅದ್ಯಕ್ಷತೆ ವಹಿಸಿದ ಶ್ರೀರಾಮಕೃಷ್ಣ ವಿದ್ಯಾಸಂಸ್ಥೆಗಳ ಸಂಚಾಲಕರಾದ ಡಾ.ಬಿ ಸಂಜೀವ ರೈ ಮಾತನಾಡಿ, ಇಂದಿನ ವೈಜ್ನಾನಿಕ ಯುಗದಲ್ಲಿ ಬದಲಾಗುತ್ತಿರುವ ವಿದ್ಯಮಾನಗಳೊಂದಿಗೆ ನಾವೂ ಕೂಡಾ ಬದಲಾಗಬೇಕಾದುದು ಅನಿವಾರ್ಯ. ಆದುದರಿಂದ ಪಾಠದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಸಮಾನ ಆಸಕ್ತಿ ಯೊಂದಿಗೆ ವಿದ್ಯಾರ್ಥಿಯ ಗುರಿ ತಲುಪಬೇಕಾದುದು ಅನಿವಾರ್ಯ ಎಂದರು.

ಉಪಪ್ರಾಂಶುಪಾಲರಾದ ಪ್ರತಿಮಾ ಶೆಟ್ಟಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಯಶೋದ ಶೆಟ್ಟಿ, ಪ್ರಾಥಮಿಕ ಪ್ರೌಡಶಾಲಾ ಉಪಪ್ರಾಂಶುಪಾಲರಾದ ರೂಪಾ ನೂತನ ವಿದ್ಯಾರ್ಥಿ ಅಧ್ಯಕ್ಷೆ ಸಾತ್ವಿಕಾ, ಕಾರ್ಯದರ್ಶಿ ಶಿಫಾಲಿ, ಸಾಂಸ್ಕೃತಿಕ ಕಾರ್ಯದರ್ಶಿ ಕು. ಸಂಪ್ರೀತ, ಕ್ರೀಡಾ ಕಾರ್ಯದರ್ಶಿ ಭವಿಶ್, ವೈಷ್ಣವಿ ಮತ್ತು ದರ್ಶನ್ ಬಿ.ಡಿ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಅನಸೂಯ ರೈ ಪ್ರಾಸ್ತಾವಿಸಿ ಸ್ವಾಗತಿಸಿದರು. ಪ್ರೊ. ಸೌಮ್ಯಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಶೇಮಪಾಲನಾಧಿಕಾರಿಯಾದ ಪ್ರೊ. ರೇಶ್ಮಾ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು.

ಉಪನ್ಯಾಸಕಿಯರಾದ ಕು. ಸಮಿತಾ ಕಾರ್ಯಕ್ರಮ ನಿರೂಪಿಸಿದರು. ಶಿಫಾಲಿ ವಂದಿಸಿದರು.