ಜಿಲ್ಲೆ

ಮಕ್ಕಳಲ್ಲಿ ಬೆಳೆಯಬೇಕಿದೆ ನಾಯಕತ್ವ ಗುಣ: ಮುಖ್ಯಶಿಕ್ಷಕಿ ಸುಮಂಗಳಾ ಎಸ್. ಆಶಯ

Avinash R

ವಿಜಯವಾಣಿ ಸುದ್ದಿಜಾಲ ಗುರುಪುರ

ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಕ್ಕಳ ವಿಶೇಷ ಗ್ರಾಮಸಭೆ ಉಳಾಯಿಬೆಟ್ಟು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಸಭಾಂಗಣದಲ್ಲಿ ಸೋಮವಾರ ನಡೆಯಿತು.

ಶಾಲೆಯ ಮುಖ್ಯಶಿಕ್ಷಕಿ ಸುಮಂಗಳಾ ಎಸ್. ಸಭೆ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ನಾಯಕತ್ವ ಗುಣ ಬೆಳೆಯಬೇಕು. ಶೋಷಣೆ ವಿರುದ್ಧ ಪ್ರತಿಭಟಿಸುವ ಗುಣ ಹಾಗೂ ಕರ್ತವ್ಯದ ಕುರಿತಾದ ಅರಿವು ಮೂಡಿಸುವಲ್ಲಿ ಮಕ್ಕಳ ವಿಶೇಷ ಗ್ರಾಮಸಭೆ ಮಹತ್ವದ್ದಾಗಿದೆ ಎಂದರು.

ಶಾಲಾ ವಿದ್ಯಾರ್ಥಿನಿ ಲಕ್ಷ್ಮೀ ಮಳಿಮಠ್ ಅಧ್ಯಕ್ಷತೆ ವಹಿಸಿ ವಾತನಾಡಿ, ಹಕ್ಕುಗಳನ್ನು ಅನುಭವಿಸುತ್ತ, ಪ್ರಾವಾಣಿಕವಾಗಿ ಕರ್ತವ್ಯ ನಿರ್ವಹಿಸೋಣ. ಸಮೃದ್ಧ ದೇಶ ಕಟ್ಟುವಲ್ಲಿ ಉತ್ತಮ ನಾಗರಿಕರಾಗೋಣ ಎಂದರು.

ಪಂಚಾಯಿತಿ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಪಿಡಿಒ ಅನಿತಾ ಕ್ಯಾಥರಿನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶಾಲಿನಿ, ಆರೋಗ್ಯ ಇಲಾಖೆಯ ಪ್ರಿಯಾ ಬ್ರಾಯಲ್ ಪಿರೇರ, ಪೊಲೀಸ್ ಇಲಾಖೆಯ ವಿಜಯಾ ಅವರು ಮಕ್ಕಳ ಹಕ್ಕುಗಳು ಮತ್ತು ಅವಕಾಶಗಳ ಬಗ್ಗೆ ಮಾತನಾಡಿದರು.

ಉಳಾಯಿಬೆಟ್ಟು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿನಿ ಅಪೀಪಾ, ಮೌಲನಾ ಆಜಾದ್ ಶಾಲೆಯ ವಿದ್ಯಾರ್ಥಿನಿ ಆಯೇಷಾ ಆಫ್ರಿನಾ ಮೊದಲಾದವರಿದ್ದರು. ಉಳಾಯಿಬೆಟ್ಟು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಚೇತನ್ ಹಾಗೂ ಡಾ.ಅಂಬೇಡ್ಕರ್ ವಸತಿ ಶಾಲೆಯ ಶಿಕ್ಷಕ ಜಯಕರ ಶೆಟ್ಟಿ ಸಹಕರಿಸಿದರು. ಮರಿಯಂ ಸ್ವಾಗತಿಸಿದರು. ಫಾತಿವಾ ಮಶಿಹ ನಿರೂಪಿಸಿದರು. ಫಾತಿವಾ ಸುನೈನಾ ವಂದಿಸಿದರು.