ಜಿಲ್ಲೆ

ನಾಯಕತ್ವ ಶಕ್ತಿಯಲ್ಲ, ಹೊಣೆಗಾರಿಕೆ

ವಿಠ್ಠಲ ಹಣಮಂತ ಬಾಳೇಕುಂದ್ರಿ

ಬೆಳಗಾವಿ: ಯಾವುದೇ ಒಂದು ನಾಯಕತ್ವ ಶಕ್ತಿಯಲ್ಲ, ಅದೊಂದು ಜವಾಬ್ದಾರಿ, ಹೊಣೆಗಾರಿಕೆ ಇದ್ದಂತೆ. ಹೀಗಾಗಿ ಸಿಗುವ ಹುದ್ದೆಯನ್ನು ಜಾಗರೂಕದಿಂದ ನಿಭಾಯಿಸಬೇಕು ಎಂದು ದಕ್ಷಿಣ ಕೊಂಕಣ ಶಿಕ್ಷಣ ಸೊಸೈಟಿ ಆಡಳಿತ ಮಂಡಳಿ ಸದಸ್ಯ ಮತ್ತು ಕ್ರೀಡಾಪಟು ಪ್ರಸಾದ ತೆಂಡೂಲ್ಕರ್​ ಹೇಳಿದರು.

ಸಂಸ್ಥೆಯ ಆರ್​ಪಿಡಿ ಕಾಲೇಜಿನಲ್ಲಿ ಮಂಗಳವಾರ ಜರುಗಿದ 2025&26ನೇ ಸಾಲಿನ ವಿದ್ಯಾರ್ಥಿ ಕೌನ್ಸಿಲ್​ ಉದ್ಘಾಟನೆ ಹಾಗೂ ನೂತನ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

ಆಡಳಿತ ಮಂಡಳಿ ಸದಸ್ಯೆ ಡಾ.ಧನಶ್ರೀ ಅಜಗಾಂವಕರ ಅಧ್ಯಕ್ಷತೆ ವಹಿಸಿದ್ದರು. ಕೌನ್ಸಿಲ್​ಗೆ ಆಯ್ಕೆಯಾದ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರಮಾಣ ವಚನ ಬೋಧಿಸಲಾಯಿತು. ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕ್ರೀಡಾ ವಿಭಾಗದ ನಿರ್ದೇಶಕ ಡಾ.ರಾಮಕೃಷ್ಣ ಎನ್​. ಇತರರಿದ್ದರು.

ಪ್ರೊ.ಅಕ್ಷಯ ಹಿರೇಮಠ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಅಭಯ ಪಾಟೀಲ ಸ್ವಾಗತಿಸಿದರು. ವಿದ್ಯಾರ್ಥಿ ಕೌನ್ಸಿಲ್​ ಉಪಾಧ್ಯಕ್ಷ ಡಾ.ಎಸ್​.ಎಚ್​.ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಶರಯು ಪೋತ್ನಿಸ್​ ನಿರೂಪಿಸಿದರು. ಆರೋಗ್ಯಪ್ಪ ವಂದಿಸಿದರು.

ಸಂಸ್ಥಾಪನಾ ದಿನಾಚರಣೆ: ಆರ್​ಪಿಡಿ ಕಾಲೇಜಿನಲ್ಲಿ ಬುಧವಾರ ಎನ್​ಎಸ್​ಎಸ್​ ಸಂಸ್ಥಾಪನಾ ದಿನಾಚರಣೆ ಹಾಗೂ 2025&26ನೇ ಸಾಲಿನ ಎನ್​ಎಸ್​ಎಸ್​ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಜರುಗಿತು. ಪ್ರಾಚಾರ್ಯ ಡಾ.ಅಭಯ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ನಾಗರಾಜ ಕಾಳೆ, ಪ್ರೊ. ಇಂದಿರಾ ಹೋಳಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸ್ನೇಹಾ ಪತ್ತಾರ ಪರಿಚಯಿಸಿದರು. ಐಶ್ವರ್ಯ ಕೋಲಕಾರ ಸ್ವಾಗತಿಸಿದರು. ಸ್ವಾತಿ ಪಾಟೀಲ ನಿರೂಪಿಸಿದರು. ನಂದಿನಿ ದಂಡಿಗ್ಯಾಗೋಳ ವಂದಿಸಿದರು.