ಹುಬ್ಬರವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ ಗಣ್ಯರು ಚಾಲನೆ ನೀಡಿದರು. ಅನಿಲಕುಮಾರ ಬಿರಾದಾರ, ಪ್ರೊ.ಪಿ.ಆರ್. ಸವದತ್ತಿ, ಎಸ್.ಎಸ್. ಕುರಬೇಟಿ, ಎಸ್.ಎಂ. ಲೈನದಾರ ಇತರರಿದ್ದರು. 
ಜಿಲ್ಲೆ

ನಾಯಕತ್ವ ಬೆಳೆಸಲು ಎನ್‌ಎಸ್‌ಎಸ್ ಸಹಕಾರಿ

ರಾಯಬಾಗ: ರಾಷ್ಟ್ರೀಯ ಸೇವಾ ಯೋಜನೆಯು ವಿದ್ಯಾರ್ಥಿಗಳನ್ನು ಸಮಾಜಮುಖಿಯನ್ನಾಗಿ ರೂಪಿಸುತ್ತದೆ. ಜತೆಗೆ ನಾಯಕತ್ವದ ಗುಣಗಳನ್ನು ಬೆಳೆಸುತ್ತದೆ ಎಂದು ಹುಬ್ಬರವಾಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅನಿಲಕುಮಾರ ಬಿರಾದಾರ ಹೇಳಿದರು.

ತಾಲೂಕಿನ ಹುಬ್ಬರವಾಡಿ ಗ್ರಾಪಂ ಸಭಾಭವನದಲ್ಲಿ ಶಿಕ್ಷಣ ಪ್ರಸಾರಕ ಮಂಡಳದ ಕಾನೂನು ಮಹಾವಿದ್ಯಾಲಯದ ವತಿಯಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಏಳು ದಿನಗಳ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾರ್ಯಕ್ರಮದ ಅಧಿಕಾರಿ ಪ್ರೊ.ಪಿ.ಆರ್. ಸವದತ್ತಿ ಮಾತನಾಡಿದರು. ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಕುರಬೇಟಿ, ಉಪನ್ಯಾಸಕರಾದ ಎಸ್.ಎಂ. ಲೈನದಾರ, ಆರ್.ಎಸ್. ಕಾಂಬಳೆ, ಐ.ಆರ್. ಪತ್ತಾರ, ಎಂ.ಆರ್. ಕಠಾರಿ, ಶಿಬಿರದ ಕಾರ್ಯದರ್ಶಿ ಅನುಪ ಮನಗುತ್ತಿ, ಗ್ರಾಪಂ ಕಾರ್ಯದರ್ಶಿ ದಶರಥ ಭೋಸಲೆ, ಸದಸ್ಯರಾದ ರೇವಪ್ಪ ನಾಯಿಕ, ಶಿವು ಬಬಲೇಶ್ವರ, ಸದಾನಂದ ಚೌಗಲಾ ಹಾಗೂ ಯುಸ್ೂ ಹುಡೇದ, ಸಿದ್ದು ಪೂಜಾರಿ ಇತರರಿದ್ದರು. ಪೂನಂ ಗಾವನೆ ಸ್ವಾಗತಿಸಿದರು. ಲಕ್ಷ್ಮಣ ನಿವಲಗಿ ನಿರೂಪಿಸಿದರು. ಪಲ್ಲವಿ ದರೂರ ವಂದಿಸಿದರು.