ಜಿಲ್ಲೆ

ತರಬೇತಿಯಿಂದ ನಾಯಕತ್ವ ಗುಣ ವೃದ್ದಿ

ಸೋಮನಾಥ ರೆಡ್ಡಿ

ಮುಂಡರಗಿ: ತಾ.ಪಂ. ಸಾಮರ್ಥ್ಯಸೌಧದಲ್ಲಿ ಅಬ್ದುಲ್ ನಜೀರ್‌ಸಾಬ್ ರಾಜ್ಯ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಸಂಸ್ಥೆ ಮೈಸೂರು, ಜಿ.ಪಂ, ತಾ.ಪಂ. ಸಂಯುಕ್ತಾಶ್ರಯದಲ್ಲಿ ಗ್ರಾ.ಪಂ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪುರುಷ ಚುನಾಯಿತ ಸದಸ್ಯರು, ಅಧ್ಯಕ್ಷ, ಉಪಾಧ್ಯಕ್ಷರಿಗೆ ಸಾಮರ್ಥ್ಯಾಭಿವೃದ್ದಿ ತರಬೇತಿ ಕಾರ್ಯಾಗಾರ ನಡೆಯಿತು.

ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿ ಉಮಾ ಮಹಾದೇವನ್ ಮಾತನಾಡಿ, ಸದಸ್ಯರಿಗೆ ನಾಯಕತ್ವದ ಗುಣಗಳನ್ನು ಬೆಳೆಸಿ ಅವರ ಸಾಮರ್ಥ್ಯ ವೃದ್ದಿಸಲು ತರಬೇತಿ ಅನುಕೂಲವಾಗಿದೆ ಎಂದರು.

ಕೆ.ಲಕ್ಷ್ಮಿಪ್ರಿಯ, ಟಿ.ಎಂ. ಅಬೂಬಕರ್, ಡಾ. ಉಮೇಶ ಸಿ.ಜೆ., ಡಾ. ಶಿವಪ್ರಸಾದ ಬಿ.ಎಂ, ಪ್ರಾಣೇಶ, ಡಾ. ಶಶಿಕುಮಾರ.ಡಿ.ಜೆ, ಸಿ. ವಿಜಯಕುಮಾರ ಆನ್‌ಲೈನ್ ಯ್ಯೂಟೂಬ್ ಮೂಲಕ ಮಾಹಿತಿ ನೀಡಿದರು. ಜಿ.ಆರ್.ಪಿ ಲಲಿತಾ ಜೊಂಡಿ, ತಾ.ಪಂ.ವ್ಯವಸ್ಥಾಪಕ ಜಗದೀಶ, ತರಬೇತಿ ವಿಷಯ ನಿರ್ವಾಹಕ ಸಿ.ಬಿ. ಪಾಟೀಲ ಇದ್ದರು.