ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಖಂಡ ಸಿ.ಎಂ.ಸಾಧಿಕ್ ಅವರು ಆಕ್ಷೇಪ ವ್ಯಕ್ತಪಡಿಸಿದರು.  
ಜಿಲ್ಲೆ

ಕಾಂಗ್ರೆಸ್ ನಡೆಗೆ ಮುಖಂಡರ ಆಕ್ಷೇಪ

ನವೀನ ಬಿ.ಎಂ

ಶಿವಮೊಗ್ಗ: ಶ್ರೀರಾಮ ಮಂದಿರ ವಿಚಾರದಲ್ಲಿ ಹಿಂದೂ ಪರಿವಾರದ ಪ್ರಮುಖ ಕಲ್ಲಡ್ಕ ಪ್ರಭಾಕರ್ ಭಟ್ ಅವರ ಹೇಳಿಕೆಗೆ ಕಾಂಗ್ರೆಸ್ ಸಮರ್ಪಕವಾಗಿ ಕೌಂಟರ್ ನೀಡಲಿಲ್ಲ. ಕೇವಲ ಮತ ಹಾಕಲು ಮುಸ್ಲಿಮರಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ನಡೆಯನ್ನು ಖಂಡಿಸುತ್ತೇವೆಂದು ಸಭೆಯಲ್ಲಿ ಸಿ.ಎಂ.ಸಾಧಿಕ್ ಸೇರಿ ಕೆಲ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸರ್ಕಾರದ ಐದನೇ ಗ್ಯಾರಂಟಿ ಯುವನಿಧಿ ಯೋಜನೆ ಜಾರಿ ಕುರಿತ ಜಿಲ್ಲಾಮಟ್ಟದ ಕಾಂಗ್ರೆಸ್ ಪ್ರಮುಖರ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಎಸ್.ಸುಂದರೇಶ್ ಭಾಷಣದ ವೇಳೆ ಬಿಜೆಪಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವನ್ನು ತಮ್ಮದೆಂದು ಬಿಂಬಿಸುತ್ತಿದೆ ಎಂದು ಕಾರ್ಯಕರ್ತರು ದೂರಿದರು.
ಅಲ್ಪಸಂಖ್ಯಾತರ ಭಾವನೆಯನ್ನು ಕೆರಳಿಸುತ್ತಿದ್ದಾರೆ. ಆದರೆ ನಾವ್ಯಾರೂ ಅದಕ್ಕೆ ಕಿವಿಕೊಡದೇ ಪಕ್ಷ ಸಂಘಟನೆ ಮತ್ತು ಗ್ಯಾರಂಟಿಗಳ ಅನುಷ್ಠಾನಕ್ಕೆ ಒತ್ತು ನೀಡಬೇಕೆಂದು ಮುಖಂಡ ಮುಕ್ತಿಯಾರ್ ಅಹಮ್ಮದ್ ಸಲಹೆ ನೀಡಿದರು. ಇದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದು ಸಭೆಯಲ್ಲಿ ಗೊಂದಲ ಮೂಡಿಸಿತು.