ಜಿಲ್ಲೆ

ಪರಿಷತ್ ಚುನಾವಣೆಗೆ ಮಂತರ್ - ಬೋಪಯ್ಯ ಮತ ಯಾಚನೆ

ಎ. ಆರ್. ರಘುರಾಮ

ಕುಶಾಲನಗರ : ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಕುಶಾಲನಗರ ಪಟ್ಟಣದ ಸರ್ಕಾರಿ ಶಾಲೆ ಮತಗಟ್ಟೆಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸೋಮವಾರ ವೀಕ್ಷಣೆಗೆಂದು ಆಗಮಿಸಿದ ಸಂಧರ್ಭದಲ್ಲಿ ವಿಪಕ್ಷದ ನಾಯಕರು ಹಾಗೂ ಮಾಜಿ ಸಭಾಪತಿ ಕೆ.ಜಿ ಬೋಪಯ್ಯ ಮುಖಾಮುಖಿ ಆದರು. ಇಬ್ಬರೂ ಪರಸ್ಪರ ಉಭಯ ಕುಶಲೋಪರಿ ನಡೆಸಿದರು. ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಇಬ್ಬರೂ ಮತ ಯಾಚನೆ ನಡೆಸಿದರು. ಎರಡು ಪಕ್ಷದ ನಾಯಕರ ಮಿಲನ ಮುಖಂಡರಿಗೆ ಕುತೂಹಲ ಮೂಡಿಸಿತು.