ವಿಜಯವಾಣಿ ಸುದ್ದಿಜಾಲ ಧಾರವಾಡ
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ನಗರದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಥೆಯ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿದ್ದಾರೆ. ಐಶ್ವರ್ಯ ಪೆದ್ದಿ ಶೇ. 92.48 ಅಂಕ ಗಳಿಸಿ ಶಾಲೆಗೆ ಪ್ರಥಮ, ಅಶ್ವಿನಿ ಪಾಟೀಲ ಶೇ. 83.35 ದ್ವಿತೀಯ, ಸಂತೋಷಿ ಸಾವಂತ ಶೇ. 83.04 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾಳೆ. ಮಂಜುಳಾ ಲೆಂಕಣ್ಣವರ ಶೇ. 83.04, ಮುಜಮಿಲ್ಲ ಪುಲ್ಲಿವಾಲೆ ಶೇ. 81.44 ಅಂಕ ಗಳಿಸಿದ್ದಾನೆ. ವಿದ್ಯಾರ್ಥಿಗಳನ್ನು ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಮುಖ್ಯಾಧ್ಯಾಪಕಿ, ಶಿಕ್ಷಕರು ಅಭಿನಂದಿಸಿದ್ದಾರೆ.