ಕುಂದಾಪುರ ಹೋಲಿ ರೋಜರಿ ಚರ್ಚಿನ ಕಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಬರ್ನಾಡ್ ಡಿಕೋಸ್ತಾ ಮತ್ತು ವಿಲ್ಸನ್ ಒಲಿವೆರಾ ಅವರನ್ನು ಸನ್ಮಾನಿಸಲಾಯಿತು 
ಜಿಲ್ಲೆ

ರೋಜರಿ ಚರ್ಚ್‌ನಲ್ಲಿ ಶ್ರೀಸಾಮಾನ್ಯರ ದಿನ

ಇಂದಿರಾ ಎನ್ ಕೆ

ಗಂಗೊಳ್ಳಿ: ಕುಂದಾಪುರ ಹೋಲಿ ರೋಜರಿ ಚರ್ಚ್‌ನ ಕೆಥೊಲಿಕ್ ಸಭಾ ಘಟಕ ಮತ್ತು ಶ್ರೀಸಾಮಾನ್ಯರ ಆಯೋಗದಿಂದ ಶ್ರೀಸಾಮಾನ್ಯರ ದಿನವನ್ನು ಭಾನುವಾರ ಆಚರಿಸಲಾಯಿತು. ಕೆಥೊಲಿಕ್ ಸಭಾ ಆಧ್ಯಾತ್ಮಿಕ ನಿರ್ದೇಶಕ ರೆ.ಫಾ.ಪಾವ್ಲ್ ರೇಗೊ ನೇತೃತ್ವದಲ್ಲಿ ಚರ್ಚ್‌ನಲ್ಲಿ ಕೃತಜ್ಞತಾ ಬಲಿದಾನ ಅರ್ಪಿಸಲಾಯಿತು. ಪತ್ರಕರ್ತ ಬರ್ನಾಡ್ ಡಿಕೋಸ್ತಾ ಕುಂದಾಪುರ ಮತ್ತು ಕೊಂಕಣಿ ಸಂಗೀತಗಾರ ವಿಲ್ಸನ್ ಒಲಿವೆರಾ ಪಡುಕೋಣೆ ಅವರನ್ನು ಸನ್ಮಾನಿಸಲಾಯಿತು. ಚರ್ಚ್ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಶುಭ ಕೋರಿದರು. ಶ್ರೀ ಸಾಮಾನ್ಯ ಆಯೋಗದ ಸಂಚಾಲಕ ವಾಲ್ಟರ್ ಡಿಸೋಜ ಮತ್ತಿತರರು ಇದ್ದರು.

ಕೆಥೊಲಿಕ್ ಸಭಾ ಅಧ್ಯಕ್ಷ ವಿಲ್ಸನ್ ಡಿ’ಆಲ್ಮೇಡಾ ಸ್ವಾಗತಿಸಿದರು. ಪಾಲನಾ ಮಂಡಳಿ ಕಾರ್ಯದರ್ಶಿ ಆಶಾ ಕರ್ವಾಲ್ಲೊ ಮತ್ತು ಸರ್ವ ಆಯೋಗಗಳ ಸಂಚಾಲಕ ಪ್ರೇಮಾ ಡಿ’ಕುನ್ಹಾ ಸನ್ಮಾನಿತರನ್ನು ಪರಿಚಯಿಸಿದರು. ಕಾರ್ಯದರ್ಶಿ ಶಾಂತಿ ಪಿಂಟೋ ವಂದಿಸಿದರು. ಡಾ.ಸೋನಿ ಕೋಸ್ತಾ ಕಾರ್ಯಕ್ರಮ ನಿರೂಪಿಸಿದರು.