ಮುಧೋಳದ ಪದ್ಮಾವತಿ ಕಾಲನಿಯಲ್ಲಿ ಶಂಕರಮಠದ ನಿರ್ಮಾಣಕ್ಕೆ ಜಗದ್ಗುರು ವಿಧುಶೇಖರ ಭಾರತಿ ಶ್ರೀಗಳು ಶಿಲಾನ್ಯಾಸ ನೆರವೇರಿಸಿದರು. ರಮೇಶ ಗೋಡಖಿಂಡಿ, ಪ್ರಮೋದ ಬಾಜಿ, ಶೋಭಾ ಬಾಜಿ, ಉದಯ ಕುಲಕರ್ಣಿ, ಆರತಿ ಸೋನಾರ, ವಂದನಾ ಕುಲಕರ್ಣಿ, ಸೂರಜ ಬಾಜಿ, ಶಂಕರ ಸಿಂಧೆ, ರಾಮನಗೌಡ ನಾಡಗೌಡ, ರಾಜು ಟಂಕಸಾಲಿ ಇದ್ದಾರೆ. 
ಜಿಲ್ಲೆ

ಶಂಕರಮಠ ಕಾಮಗಾರಿಗೆ ಶಿಲಾನ್ಯಾಸ

ವಿನಯ ಆಶೋಕ ನಾಯ್ಕ

ಮುಧೋಳ: ನಗರದ ಪದ್ಮಾವತಿ ಕಾಲನಿಯಲ್ಲಿ ಶೀಘ್ರದಲ್ಲಿ ಶಂಕರಮಠ ನಿರ್ಮಾಣದ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಶ್ರೀಗಳು ಹೇಳಿದರು.

ನಗರದಲ್ಲಿ ಬುಧವಾರ ಶಂಕರಮಠದ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಮಠದ ನೀಲಿನಕ್ಷೆ ರಚನೆ ಕಾರ್ಯ ನಡೆಯುತ್ತಿದೆ. ಭವ್ಯವಾದ ಶಂಕರಮಠವನ್ನು ಸ್ಥಾಪಿಸಲಾಗುವುದು. ನಗರದ ಕೇಂದ್ರ ಭಾಗದಲ್ಲಿ ವಿಶಾಲವಾದ ನಿವೇಶನವನ್ನು ದಾನವಾಗಿ ನೀಡಿದ ಭಾವು ಜುಮನಾಳ (ಸೋನಾರ), ಗಿರೀಶ ಸೋನಾರ, ವಿಠಲ ಸೋನಾರ, ಸಂಜಯ ಸೋನಾರ ಅವರು ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದರು.

ಶಂಕರ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ ಬಾಜಿ, ವಲ್ಲಭಭಟ್ ಕವಟೇಕರ, ಗುರುನಾಥ ಜೋಷಿ, ವೆಂಕಟೇಶ ಕೊಲ್ಹಾರ, ಬಳವಂತರಾವ ಕುಲಕರ್ಣಿ, ರಮೇಶ ಗೋಡಖಿಂಡಿ, ಪ್ರಮೋದ ಬಾಜಿ, ಶೋಭಾ ಬಾಜಿ, ಉದಯ ಕುಲಕರ್ಣಿ, ಆರತಿ ಸೋನಾರ, ವಂದನಾ ಕುಲಕರ್ಣಿ, ಸೂರಜ ಬಾಜಿ, ಶಂಕರ ಸಿಂಧೆ, ರಾಮನಗೌಡ ನಾಡಗೌಡ, ರಾಜು ಟಂಕಸಾಲಿ ಮತ್ತಿತರರಿದ್ದರು.