ಜಿಲ್ಲೆ

ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ

ಕೊಳ್ಳೇಗಾಲ: ಶ್ರೀ ಮಲೆ ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠ ಪಟ್ಟದ ಹಿರಿಯ ಶ್ರೀ ಗುರುಸ್ವಾಮೀಜಿ ಅವರು ಲಿಂಗೈಕರಾದ ಹಿನ್ನೆಲೆ ಮಂಗಳವಾರ ಪಟ್ಟಣದ ಶ್ರೀ ಗುರು ಮಲ್ಲೇಶ್ವರ ಕಾಂಪ್ಲೆಕ್ಸ್‌ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಎರಡು ನಿಮಿಷ ಕಾಲ ಮೌನ ಆಚರಣೆ ಮಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಮಾಜಿ ಅಧ್ಯಕ್ಷ ಮಹದೇವ ಪ್ರಸಾದ್, ಬಸವರಾಜು, ಕಾರ್ಯದರ್ಶಿ ಮಹೇಶ್, ನಿರ್ದೇಶಕ ಬೃಂಗೇಶ್, ಕಿರಣ್, ವೀರಭದ್ರ, ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ನಾಗರಾಜು ಎಸ್.ಕೊಂಗರಹಳ್ಳಿ, ಜಿಎಸ್‌ಎಂ ಪ್ರಸಾದ್, ನಗರಸಭೆ ಸದಸ್ಯ ಜಿ.ಪಿ ಶಿವಕುಮಾರ್ ಮತ್ತಿತರಿದ್ದರು.