ಹೊರ್ತಿ ಸಮೀಪದ ಹಲಸಂಗಿ ಗ್ರಾಮದಲ್ಲಿ ಲಾಯವ್ವದೇವಿ ಜಾತ್ರಾ ಮಹೋತ್ಸವ ನಿಮಿತ್ತ ಪಲಕ್ಕಿ ಉತ್ಸವ ನಡೆಯಿತು. 
ಜಿಲ್ಲೆ

ಲಾಯವ್ವದೇವಿ ಜಾತ್ರೋತ್ಸವ

ಗಿರೀಶ ಸಗರ

ಹೊರ್ತಿ: ಹಲಸಂಗಿ ಗ್ರಾಮದ ಗ್ರಾಮದೇವತೆ ಲಾಯವ್ವದೇವಿ ಜಾತ್ರಾ ಮಹೋತ್ಸವ ಶುಕ್ರವಾರ ವಿಜೃಂಭಣೆಯಿಂದ ಜರುಗಿತು.

ಲಾಯವ್ವದೇವಿ ಮೂರ್ತಿ, ಬೀರಲಿಂಗೇಶ್ವರ ಪಲ್ಲಕ್ಕಿ, ಮಾಳಿಂಗರಾಯ ದೇವರ ಪಲ್ಲಕ್ಕಿಯೊಂದಿಗೆ ಗಂಗೆ ಸೀತಾಳ ಮುಗಿಸಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಗಳೊಂದಿಗೆ ದೇವಸ್ಥಾನಕ್ಕೆ ಆಗಮಿಸಲಾಯಿತು.

ನಂತರ ಭಕ್ತರಿಗೆ ಅನ್ನ ಪ್ರಸಾದ ನಡೆಯಿತು. ಭಾಗೋಡಿಸಿದ್ಧೇಶ್ವರ ಡೊಳ್ಳಿನ ಗಾಯನ ಸಂ, ಅಫಜಲಪುರ, ಬಾಬಾನಗರ ನಗರಸಿದ್ಧೇಶ್ವರ ಡೊಳ್ಳಿನ ಗಾಯನ ಸಂದಿಂದ ಬೆಳಗ್ಗೆಯಿಂದ ಸಂಜೆಯವರಗೆ ಸುಪ್ರಸಿದ್ಧ ಡೊಳ್ಳಿನ ಪದಗಳು ಜರುಗಿದವು.

ಬೀರಲಿಂಗೇಶ್ವರ ಪಲ್ಲಕ್ಕಿ, ಮಾಳಿಂಗರಾಯ ದೇವರ ಪಲ್ಲಕಿಗಳನ್ನು ಬೀಳ್ಕೊಡುವ ಕಾರ್ಯಕ್ರಮ ನಡೆಯಿತು. ಅಪ್ಪಾಶ್ಯಾ ಸುಣಗಾರ, ಆರ್​.ಪಿ.ಸುಣಗಾರ, ಸಿದ್ಧರಾಮ ಕೋಳಿ, ಅಪ್ಪಶ್ಯಾ ವಾಲಿಕಾರ, ಪುಂಡಲೀಕ ಸುಣಗಾರ ಇತರರಿದ್ದರು