ಜಿಲ್ಲೆ

ನಾಗರಿಕತೆ ಬೆಳವಣಿಗೆಯ ಕಾರಣೀಕರ್ತರು

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಲಕ್ಷ್ಮೇಶ್ವರ: ಪಂಚ ಶ್ರೇಷ್ಠ ಕುಲಕಸುಬುಗಳ ಮೂಲಕ ಜಗತ್ತಿನ ಜನರ ಬೇಡಿಕೆಗಳನ್ನು ಪೂರೈಸುತ್ತ ಕಾಯಕವೇ ಕೈಲಾಸ ಎಂಬ ಬಸವಣ್ಣನವರ ತತ್ವದಡಿ ಬದುಕುವ ವಿಶ್ವಕರ್ಮರು ನಾಗರಿಕತೆಯ ಬೆಳವಣಿಗೆಗೆ ಕಾರಣರಾಗಿದ್ದಾರೆ ಎಂದು ಕಂದಾಯ ನಿರೀಕ್ಷಕ ಬಿ.ಎಂ. ಕಾತರಾಳ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ ವಿಶ್ವಕರ್ಮ ಜಯಂತಿಯಲ್ಲಿ ಅವರು ಮಾತನಾಡಿದರು. ವಿಶ್ವಕರ್ಮರು ವಿಶ್ವದ ಮೊದಲ ವಾಸ್ತುಶಿಲ್ಪಿಗಳು. ವಿಶ್ವಕರ್ಮ ಎಂಬುದು ದೈವೀ ಶಕ್ತಿ. ಪ್ರಗತಿಶೀಲ ಸಮಾಜಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರವಾಗಿದೆ. ಶ್ರಮಿಕರು, ಕುಶಾಗ್ರಮತಿ ಗಳು, ಬುದ್ಧಿಜೀವಿಗಳೂ ಆಗಿರುವ ವಿಶ್ವಕರ್ಮ ಸಮಾಜದವರು ಒಗ್ಗಟ್ಟಿನಿಂದ ಬಾಳಬೇಕು. ಮಕ್ಕಳಿಗೆ ಕುಲಕಸುಬಿನ ಜತೆಗೆ ಉತ್ತಮ ಶಿಕ್ಷಣ ನೀಡಬೇಕು ಎಂದರು. ವಿಶ್ವಕರ್ಮ ಸಮಾಜದ ತಾಲೂಕಾಧ್ಯಕ್ಷ ಈರಣ್ಣ ಬಡಿಗೇರ, ಎಂ.ಎಂ. ಸುತಾರ, ಬಾಸ್ಕರ ಸೊರಟೂರ, ಮಕರಂದ ಹುಲಬಜಾರ, ಮೌನೇಶ ಬಾಲೆಹೊಸೂರ, ಮನೋಹರ ಪತ್ತಾರ, ಮಹಾಂತೇಶ ಬಡಿಗೇರ, ರಾಮಚಂದ್ರ ಬಡಿಗೇರ, ಶ್ರೀಕಾಂತ ಪತ್ತಾರ, ಪ್ರಸನ್ನ ಬೆಂತೂರ, ಪ್ರಕಾಶ ಹುಲಬಜಾರ, ರೇಣುಕಾ ಹರಿಜನ, ಪ್ರಶಾಂತ ಸನದಿ, ಇದ್ದರು.